Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಂಬೈ: ಕ್ರಿಕೆಟಿಗ ಧೋನಿ ಹೆಲಿಕಾಪ್ಟರ್ ಶಾಟ್ ನಿಂದಲೇ ಜನಪ್ರಿಯರಾದವರು. ಅವರ ಈ ಶಾಟ್ ನ್ನು ಇದೀಗ ಯುವ ಕ್ರಿಕೆಟಿಗರೂ ಅನುಕರಿಸಲು ಹೋಗುತ್ತಿದ್ದಾರೆ.
ಇದೇ ರೀತಿ ಇಶಾನ್ ಕಿಶನ್ ಎಂಬ ಯುವ ಕ್ರಿಕೆಟಿಗ ಧೋನಿಯ ಟ್ರೇಡ್ ಮಾರ್ಕ್ ಶಾಟ್ ಹೆಲಿಕಾಪ್ಟರ್ ಶಾಟ್ ಹೊಡೆದು ಯಶಸ್ವಿಯಾಗಿದ್ದಾರೆ. ಕೋಲ್ಕೊತ್ತಾ ವಿರುದ್ಧದ ಪಂದ್ಯದಲ್ಲಿ ಇಶಾನ್ 21 ಬಾಲ್ ಗಳಲ್ಲಿ 62 ಸಿಡಿಸಿದ್ದರು. ಈ ಸಂದರ್ಭದಲ್ಲಿ ಅವರು ಧೋನಿಯ ಹೊಡೆತವನ್ನೂ ಪ್ರಯೋಗ ಮಾಡಿದ್ದಾರೆ.
ವಿಶೇಷವೆಂದರೆ ಇಶಾನ್ ಕಿಶನ್ ಹಲವು ಬಾರಿ ಧೋನಿ ಜತೆ ಟಿಪ್ಸ್ ಪಡೆದಿದ್ದರು. ಇದೀಗ ತಮ್ಮ ಮೆಚ್ಚಿನ ಕ್ರಿಕೆಟಿಗನ ಹೊಡೆತವನ್ನೇ ಕಾಪಿ ಮಾಡಿ ಸೈ ಎನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.