ಮೊಹಾಲಿ: ಕಳೆದ ಆವೃತ್ತಿಯವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಕೆಎಲ್ ರಾಹುಲ್ ಮತ್ತು ಕ್ರಿಸ್ ಗೇಲ್ ರನ್ನು ಈ ಆವೃತ್ತಿಗೆ ಹರಾಜಿಗೆ ಬಿಟ್ಟುಕೊಟ್ಟು ಆರ್ ಸಿಬಿ ತಪ್ಪು ಮಾಡಿತೇ?
ಈ ಕೂಟದಲ್ಲಿ ಮೊದಲ ಪಂದ್ಯದಿಂದಲೂ ರಾಹುಲ್ ಸಿಡಿಯುವುದನ್ನು ನೋಡುತ್ತಿದ್ದರೆ ಆರ್ ಸಿಬಿ ಅಭಿಮಾನಿಗಳು ಈಗ ಹೀಗೆ ಹಳಿದುಕೊಳ್ಳುತ್ತಿದ್ದಾರೆ.
ಇಬ್ಬರೂ ಹೊಡೆ ಬಡಿಯ ಆಟಗಾರರು ಆರ್ ಸಿಬಿಯ ಸದಸ್ಯರಾಗಿದ್ದವರು ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ಗೂಡು ಸೇರಿಕೊಂಡಿದ್ದಾರೆ. ಗೇಲ್ ಮೊದಲ ಪಂದ್ಯದಲ್ಲಿ ಮಿಂಚದಿದ್ದರೂ ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 33 ಬಾಲ್ ಗಳಲ್ಲಿ 63 ರನ್ ಸಿಡಿಸಿದರೆ ರಾಹುಲ್ ಮತ್ತೊಮ್ಮೆ ನಿನ್ನೆ ಅದ್ಭುತ ಆಟವಾಡಿದರು.
ಅದರಲ್ಲೂ ವಿಶೇಷವಾಗಿ ಕೆಎಲ್ ರಾಹುಲ್ ರ ನಯನ ಮನೋಹರ ಕವರ್ ಡ್ರೈವ್ ಗಳು ರೋಮಾಂಚಕಾರಿಯಾಗಿತ್ತು. ಸದ್ಯಕ್ಕೆ ಆರ್ ಸಿಬಿಯಲ್ಲಿ ಕೊಹ್ಲಿ ಬಿಟ್ಟರೆ ಸ್ಟಾರ್ ಬ್ಯಾಟ್ಸ್ ಮನ್ ಗಳಿಲ್ಲ. ಇವರಿಬ್ಬರು ಬೇರೆ ತಂಡದಲ್ಲಿ ಮಿಂಚುತ್ತಿರುವುದು ನೋಡಿದರೆ ಆರ್ ಸಿಬಿ ಚಿಂತಕರ ಚಾವಡಿ ತಲೆ ಮೇಲೆ ಕೈ ಹೊತ್ತು ಕೂರಲೇ ಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.