ಬೆಂಗಳೂರು: ಮತ್ತೊಂದು ಸೋಲು ಬಂದಿದ್ದರೆ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಗೆ ತವರಿನಲ್ಲೇ ಮಾನ ಹರಾಜಾಗುತ್ತಿತ್ತು. ಆದರೆ ತಕ್ಕ ಸಮಯದಲ್ಲೇ ಎಬಿಡಿ ವಿಲಿಯರ್ಸ್ ತಂಡವನ್ನು ಕಾಪಾಡಿದರು.
ದೆಹಲಿ ವಿರುದ್ಧದ ಪಂದ್ಯದಲ್ಲಿ ಗೆಲುವಿಗೆ 175 ರನ್ ಬೆನ್ನತ್ತಿದ ಆರ್ ಸಿಬಿ ಯಾವತ್ತಿನ ಹಾಗೇ ಆರಂಭದಲ್ಲಿ ಕುಂಟಿಕೊಂಡು ಸಾಗಿತು. ನಾಯಕ ಕೊಹ್ಲಿ ಕೂಡಾ ನಿನ್ನೆ ದೊಡ್ಡ ಇನಿಂಗ್ಸ್ ಆಡಲಿಲ್ಲ. ಅವರು 26 ಬಾಲ್ ಗಳಲ್ಲಿ 30 ರನ್ ಸೇರಿಸಿ ಪೆವಿಲಿಯನ್ ಗೆ ಮರಳಿದಾಗ ಮತ್ತೊಂದು ಸೋಲು ಗ್ಯಾರಂಟಿ ಎನ್ನುವಂತಾಗಿತ್ತು.
ಆದರೆ ತಕ್ಕ ಸಮಯದಲ್ಲಿ ಸಿಡಿದ ಕೊಹ್ಲಿ ಸ್ನೇಹಿತ ಎಬಿಡಿ ವಿಲಿಯರ್ಸ್ ಕೇವಲ 39 ಬಾಲ್ ಗಳಲ್ಲಿ 5 ಸಿಕ್ಸರ್, 10 ಬೌಂಡರಿಗಳೊಂದಿಗೆ 90 ರನ್ ಸಿಡಿಸಿ ತಂಡಕ್ಕೆ 6 ವಿಕೆಟ್ ಗಳ ಭರ್ಜರಿ ಜಯ ದೊರಕಿಸಿಕೊಟ್ಟರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.