Publish Date: Mon, 06 Apr 2026 (08:46 IST)
Updated Date: Mon, 06 Apr 2026 (08:58 IST)
ಬೆಂಗಳೂರು: ಐಪಿಎಲ್ 2026 ರ ನಿನ್ನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 43 ರನ್ ಗಳಿಂದ ಸೋಲಿಸಿದ ಆರ್ ಸಿಬಿ ಹಲವು ದಾಖಲೆಗಳನ್ನೇ ಮಾಡಿದೆ.ಆ ದಾಖಲೆಗಳ ಪಟ್ಟಿ ಇಲ್ಲಿದೆ ನೋಡಿ.
ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ ಸಿಬಿ ಟಿಮ್ ಡೇವಿಡ್, ರಜತ್ ಪಾಟೀದಾರ್ ಅಬ್ಬರದ ಬ್ಯಾಟಿಂಗ್ ನಿಂದಾಗಿ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 250 ರನ್ ಕಲೆ ಹಾಕಿತ್ತು. ಇದಕ್ಕೆ ಉತ್ತರವಾಗಿ ಸಿಎಸ್ ಕೆ 19.4 ಓವರ್ ಗಳಲ್ಲಿ 207 ರನ್ ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತ್ತು.
ಈ ಗೆಲುವಿನೊಂದಿಗೆ ಆರ್ ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಕಳೆದ 18 ವರ್ಷಗಳಲ್ಲಿ ಯಾವ ತಂಡವೂ ಸಿಎಸ್ ಕೆ ವಿರುದ್ಧ 235 ಕ್ಕಿಂತ ಹೆಚ್ಚು ರನ್ ಗಳಿಸಿರಲಿಲ್ಲ. ಆದರೆ ಈಗ ಆರ್ ಸಿಬಿ ಆ ದಾಖಲೆ ಉಡೀಸ್ ಮಾಡಿದೆ. 36 ಬಾರಿ 250 ಪ್ಲಸ್ ರನ್ ಗಳಿಸಿದ ಆರ್ ಸಿಬಿ ಆ ಮೂಲಕ ಸಿಎಸ್ ಕೆ ನಂತರ ಎರಡನೇ ಸ್ಥಾನಕ್ಕೇರಿದೆ.
ಇನ್ನು, ಐಪಿಎಲ್ ನಲ್ಲಿ 2024 ರಿಂದ ಇದುವರೆಗೆ ಸಿಎಸ್ ಕೆ ವಿರುದ್ಧ ಆರ್ ಸಿಬಿ ಗೆಲುವು ಸಾಧಿಸಿದೆ. ಸಿಎಸ್ ಕೆ ಮತ್ತು ಆರ್ ಸಿಬಿ 14 ಬ್ಯಾಟಿಗರು ಒಟ್ಟು ಸೇರಿ ಒಂದೇ ಪಂದ್ಯದಲ್ಲಿ ಸಿಕ್ಸರ್ ಸಿಡಿಸಿರುವುದು ವಿಶೇಷವಾಗಿದೆ.
Krishnaveni K
Publish Date: Mon, 06 Apr 2026 (08:46 IST)
Updated Date: Mon, 06 Apr 2026 (08:58 IST)