Select Your Language

Notifications

webdunia
webdunia
webdunia
webdunia

IPL 2025: ಆರ್ ಸಿಬಿ ಮುಂದಿನ ಪಂದ್ಯ ಯಾವಾಗ, ಎದುರಾಳಿ ಯಾರು ಇಲ್ಲಿದೆ ಡೀಟೈಲ್ಸ್

RCB

Krishnaveni K

ಮುಂಬೈ , ಶುಕ್ರವಾರ, 4 ಏಪ್ರಿಲ್ 2025 (10:34 IST)
ಮುಂಬೈ: ಗುಜರಾತ್ ಟೈಟನ್ಸ್ ವಿರುದ್ಧ ತವರಿನಲ್ಲಿ ನಡೆದ ಮೊದಲ ಪಂದ್ಯವನ್ನು ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗ ಮುಂದಿನ ಪಂದ್ಯವನ್ನು ಯಾರ ಜೊತೆ ಆಡಲಿದೆ, ಯಾವಾಗ ಇಲ್ಲಿದೆ ಡೀಟೈಲ್ಸ್.

ಆರ್ ಸಿಬಿ ಈ ಸೀಸನ್ ನಲ್ಲಿ ಮೂರು ಪಂದ್ಯಗಳನ್ನಾಡಿದ್ದು ಮೊದಲ ಎರಡು ಪಂದ್ಯಗಳನ್ನು ಗೆದ್ದು ಮೂರನೇ ಪಂದ್ಯದಲ್ಲಿ ಸೋತಿತ್ತು. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮೊದಲ ಪಂದ್ಯವನ್ನೇ ಸೋತಿದ್ದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಹಾಗಿದ್ದರೂ ಆರ್ ಸಿಬಿ ಮತ್ತೆ ಪುಟಿದೇಳುವ ವಿಶ್ವಾಸ ಅಭಿಮಾನಿಗಳಲ್ಲೂ ಇದೆ. ಮುಂದಿನ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆ ಪ್ರಬಲ ಎದುರಾಳಿ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಈ ಪಂದ್ಯ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿದೆ.

ಮುಂಬೈ ಈ ಸೀಸನ್ ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆಡಿದ ಮೂರು ಪಂದ್ಯಗಳ ಪೈಕಿ ಎರಡು ಸೋತು ಒಂದು ಗೆಲುವು ಕಂಡಿದೆ. ಇತ್ತ ಆರ್ ಸಿಬಿ ತವರಿಗಿಂತ ಹೊರಗಿನ ಮೈದಾನದಲ್ಲೇ ಹೆಚ್ಚು ಗೆಲುವು ಕಾಣುತ್ತಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಆರ್ ಸಿಬಿ ಗೆಲ್ಲಬಹುದು ಎಂಬ ವಿಶ್ವಾಸವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

TATA IPL, KKR vs SRH: ಹೈದಾರಾಬಾದ್‌ಗೆ 201 ರನ್‌ಗಳ ಟಾರ್ಗೇಟ್ ನೀಡಿದ ಕೆಕೆಆರ್‌