Webdunia - Bharat's app for daily news and videos

Install App

IPL 2025: ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್‌ನಿಂದ ಆಲ್‌ರೌಂಡರ್‌ ಹೊರಕ್ಕೆ

Sampriya
ಶನಿವಾರ, 12 ಏಪ್ರಿಲ್ 2025 (15:19 IST)
Photo Courtesy X
ಬೆಂಗಳೂರು: ಇಂದಿನ ಐಪಿಎಲ್ ಪಂದ್ಯಾಟದಲ್ಲಿ ಲಕ್ನೋವನ್ನು ಎದುರಿಸಲಿರುವ ಗುಜರಾತ್ ಟೈಟನ್ಸ್‌ಗೆ ದೊಡ್ಡ ಆಘಾತದೊಂದಿಗೆ ಕ್ರೀಡಾಂಗಣಕ್ಕಿಳಿದಿದೆ.

ಗುಜರಾತ್ ಟೈಟಾನ್ಸ್ ಆಲ್‌ರೌಂಡರ್ ಗ್ಲೆನ್ ಫಿಲಿಪ್ಸ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನ ಉಳಿದ ಪಂದ್ಯಗಳಿಂದ ಹೊರಗಿಟ್ಟಿರುವುದಾಗಿ ಶನಿವಾರ ಫ್ರಾಂಚೈಸಿ ತಿಳಿಸಿದೆ. ತವರಿಗೆ ಮರಳಿರುವ ಕಿವೀಸ್ ಆಲ್‌ರೌಂಡರ್ ಫಿಲಿಪ್ಸ್‌ ಏಪ್ರಿಲ್ 6 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ ಪಂದ್ಯಾಟದ ವೇಳೆ ಗಾಯಗೊಂಡಿದ್ದರುಎಂದು ಟೈಟಾನ್ಸ್ ಹೇಳಿಕೆಯಲ್ಲಿ ತಿಳಿಸಿದೆ.

ಫಿಲಿಪ್ಸ್ ಎಲ್ಲಾ ಋತುವಿನಲ್ಲಿ ಜಿಟಿಯ ಪ್ಲೇಯಿಂಗ್ XI ನ ಭಾಗವಾಗಿಲ್ಲದಿದ್ದರೂ, SRH ವಿರುದ್ಧದ ಪಂದ್ಯದಲ್ಲಿ ಅವರು ಬದಲಿ ಫೀಲ್ಡರ್ ಆಗಿ ಆಡಿದ್ದರು.

SRH ಇನ್ನಿಂಗ್ಸ್ ಸಮಯದಲ್ಲಿ ಪವರ್‌ಪ್ಲೇನ ಅಂತಿಮ ಓವರ್‌ನಲ್ಲಿ ಗಾಯ ಸಂಭವಿಸಿದೆ. ಪಾಯಿಂಟ್‌ನಲ್ಲಿ ನಿಂತಿದ್ದ ಫಿಲಿಪ್ಸ್, ಇಶಾನ್ ಕಿಶನ್ ಅವರ ಹೊಡೆತವನ್ನು ಬೆನ್ನಟ್ಟಿದರು. ಆದರೆ ಅವರು ಚೆಂಡನ್ನು ಹಿಂದಕ್ಕೆ ಎಸೆದಾಗ ಗಾಯಗೊಂಡಿದ್ದ ಅವರು ಮೈದಾನದಿಂದ ಹೊರನಡೆದಿದ್ದರು.

ಗುಜರಾತ್ ಟೈಟಾನ್ಸ್ ಶಿಬಿರದಿಂದ ಮನೆಗೆ ಮರಳಿದ ಎರಡನೇ ಆಟಗಾರ ಫಿಲಿಪ್ಸ್. ಇದಕ್ಕೂ ಮುನ್ನ, ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ ವೈಯಕ್ತಿಕ ಕಾರಣಗಳಿಂದ ತಂಡವನ್ನು ತೊರೆದು ತವರಿಗೆ ಮರಳಿದ್ದರು.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಟೈಟನ್ಸ್‌ ವಿರುದ್ಧ ಡೆಲ್ಲಿಗೆ ಮುಖಭಂಗ: ಗುಜರಾತ್‌, ಆರ್‌ಸಿಬಿ, ಪಂಜಾಬ್‌ ತಂಡಗಳಿಗೆ ಪ್ಲೇಆಫ್‌ ಟಿಕೆಟ್‌

ಜೀವಬೆದರಿಕೆ ಬೆನ್ನಲ್ಲೇ ತಿರುಪತಿಗೆ ಟೀ ಇಂಡಿಯಾ ಕೋಚ್ ಭೇಟಿ, ಇಬ್ಬರು ಮಕ್ಕಳನ್ನು ಕೈಹಿಡಿದು ನಡೆದ ಗೌತಮ್ ಗಂಭೀರ್‌

ದೋಹಾ ಡೈಮಂಡ್‌ ಲೀಗ್‌ನಲ್ಲಿ ನೀರಜ್ ಚೋಪ್ರಾ ವಿರುದ್ಧ ಸ್ಪರ್ಧಿಸದ ಪಾಕ್‌ನ ಅರ್ಷದ್‌ ನದೀಮ್, ಕಾರಣ ಹೀಗಿದೆ

ಪಂದ್ಯ ನಿಂತ್ರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಿರಾಕಲ್‌ಗೆ ಕೊಹ್ಲಿ ಅಭಿಮಾನಿಗಳು ಫುಲ್ ಖುಷ್‌, Video Viral

ಮುಂದಿನ ಸುದ್ದಿ
Show comments