Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಐಪಿಎಲ್ 2024: ಮೊದಲ ಪ್ಲೇ ಆಫ್ ಪಂದ್ಯಕ್ಕೆ ಮಳೆ ಬರಬಹುದೇ

Ahammadabad

Krishnaveni K

ಅಹಮ್ಮದಾಬಾದ್ , ಮಂಗಳವಾರ, 21 ಮೇ 2024 (09:20 IST)
ಅಹಮ್ಮದಾಬಾದ್: ಐಪಿಎಲ್ 2024 ರಲ್ಲಿ ಇಂದು ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೆಕೆಆರ್ ನಡುವೆ ಮೊದಲ ಪ್ಲೇ ಆಫ್ ಪಂದ್ಯ ನಡೆಯಲಿದೆ. ಇಂದಿನ ಪಂದ್ಯಕ್ಕೆ ಹವಾಮಾನ ಹೇಗಿರಲಿದೆ ಎಂಬ ವರದಿ ಇಲ್ಲಿದೆ.

ದಕ್ಷಿಣ ಭಾರತದಲ್ಲಿ ಈಗಾಗಲೇ ಮಳೆ ಶುರುವಾಗಿದೆ. ಈ ಐಪಿಎಲ್ ನಲ್ಲಿ ಒಟ್ಟು ಎರಡು ಪಂದ್ಯಗಳು ಮಳೆಗೆ ಆಹುತಿಯಾಗಿವೆ. ಲೀಗ್ ಪಂದ್ಯದಲ್ಲಿ ಮಳೆ ಬಂದು ಕೆಲವು ತಂಡಗಳ ಪ್ಲೇ ಆಫ್ ಕನಸಿಗೆ ತಣ್ಣೀರೆರಚಿದ್ದು ನಿಜ. ಆದರೆ ಇದೀಗ ಪ್ಲೇ ಆಫ್ ಹಂತದಲ್ಲಿ ಮಳೆ ಬರುವ ಸಾಧ್ಯತೆ ಬಗ್ಗೆ ಹವಾಮಾನ ವರದಿ ಹೀಗಿದೆ.

ಉತ್ತರ ಭಾರತಕ್ಕೆ ಇನ್ನೂ ಮಳೆ ಅಷ್ಟಾಗಿ ಬಂದಿಲ್ಲ. ಅದರಲ್ಲೂ ಅಹಮ್ಮದಾಬಾದ್ ನಲ್ಲಿ ತಾಪಮಾನ 40 ಡಿಗ್ರಿಗಿಂತಲೂ ಅಧಿಕವಿದೆ. ಇಂದೂ ಅದೇ ತಾಪಮಾನ ಮುಂದುವರಿಯಲಿದೆ. ಬಹುತೇಕ ದಿನವಿಡೀ ಸುಡು ಬಿಸಿಲು ಇರಲಿದ್ದು, ರಾತ್ರಿಯೂ ಮಳೆ ಬಿಡಿ, ಮೋಡದ ಲಕ್ಷಣವೂ ಇಲ್ಲ.

ಹೀಗಾಗಿ ಇಂದು ಮಳೆ ಬರುವ ಸಾಧ‍್ಯತೆಗಳು ಕಡಿಮೆ. ಇದು ರೋಚಕ ಹಣಾಹಣಿಯನ್ನು ಎದುರು ನೋಡುತ್ತಿರುವ ಪ್ರೇಕ್ಷಕರಿಗೆ ಸಮಾಧಾನಕರ ಸಂಗತಿಯಾಗಿದೆ. ಇಂದು ಮಾತ್ರವಲ್ಲ, ನಾಳೆ ಆರ್ ಸಿಬಿ ಮತ್ತು ರಾಜಸ್ಥಾನ್ ನಡುವೆ ನಡೆಯಲಿರುವ ಪಂದ್ಯಕ್ಕೂ ಮಳೆ ಭೀತಿಯಿಲ್ಲ. ಹೀಗಾಗಿ ಅಂತಿಮ ಹಂತದ ಪಂದ್ಯಗಳು ನಿರಾತಂಕವಾಗಿ ಸಾಗಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಮೊದಲ ಪ್ಲೇ ಆಫ್ ನಲ್ಲಿಂದು ಸನ್ ರೈಸರ್ಸ್ ಹೈದರಾಬಾದ್, ಕೆಕೆಆರ್ ಮುಖಾಮುಖಿ