Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಐಪಿಎಲ್ 2024: ಸತತ ಎರಡನೇ ಬಾರಿಗೆ ಸಿಎಸ್ ಕೆ ಸೋಲುಣಿಸಿದ ಲಕ್ನೋ ಸೂಪರ್ ಜೈಂಟ್ಸ್

LSG

Krishnaveni K

ಚೆನ್ನೈ , ಬುಧವಾರ, 24 ಏಪ್ರಿಲ್ 2024 (08:47 IST)
Photo Courtesy: Twitter
ಚೆನ್ನೈ: ಐಪಿಎಲ್ 2024 ರಲ್ಲಿ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ಸತತ ಎರಡನೇ ಬಾರಿಗೆ ಈ ಕೂಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು ದಾಖಲಿಸಿದೆ. ರೋಚಕ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ 17 ರನ್ ಗಳಿಸಿ ಲಕ್ನೋ 6 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ.

ಮೊದಲು ಬ್ಯಾಟಿಂಗ್ ಸಿಎಸ್ ಕೆ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿತು. ನಾಯಕ ಋತುರಾಜ್ ಗಾಯಕ್ ವಾಡ್ 60 ಎಸೆತಗಳಿಂದ 108 ರನ್ ಗಳಿಸಿ ಮಿಂಚಿದರು. ಇದರಲ್ಲಿ 3 ಸಿಕ್ಸರ್ 12 ಬೌಂಡರಿ ಸೇರಿತ್ತು. ಅವರಿಗೆ ಸಾಥ್ ನೀಡಿ ಶಿವಂ ದುಬೆ 27 ಎಸೆತಗಳಿಂದ 68 ರನ್ ಗಳಿಸಿದರು. ಇವರಿಬ್ಬರ ಅಬ್ಬರದಿಂದಾಗಿ ಚೆನ್ನೈ 200 ರ ಗಡಿ ದಾಟಿತು.

 ಈ ಮೊತ್ತ ಬೆನ್ನತ್ತಿದ ಲಕ್ನೋ ಆರಂಭದಲ್ಲೇ ಕ್ವಿಂಟನ್ ಡಿ ಕಾಕ್ ರನ್ನು ಶೂನ್ಯಕ್ಕೆ ಕಳೆದುಕೊಂಡಿತು. ಕೆಎಲ್ ರಾಹುಲ್ ಕೂಡಾ 16 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ ಲಕ್ನೋ ಪರ ಏಕಾಂಗಿಯಾಗಿ ಹೋರಾಡಿದ್ದು ಮಾರ್ಕಸ್ ಸ್ಟಾಯ್ನಿಸ್. ಒಟ್ಟು 63 ಎಸೆತ ಎದುರಿಸಿದ ಅವರು ಅಜೇಯ 124 ರನ್ ಗಳಿಸಿ ತಂಡಕ್ಕೆ ನಂಬಲಸಾಧ‍್ಯ ಗೆಲುವು ಕೊಡಿಸಿದರು. ಅಂತಿಮ ಓವರ್ ನಲ್ಲಿ ಲಕ್ನೋಗೆ 17 ರನ್ ಬೇಕಾಗಿತ್ತು. ಮೊದಲ ಎರಡು ಎಸೆತಗಳನ್ನು ಒಂದು ಸಿಕ್ಸರ್, ಒಂದು ಬೌಂಡರಿ ಹೊಡೆದ ಸ್ಟಾಯ್ನಿಸ್ ಬಳಿಕ ಲಕ್ನೋ ಗೆಲುವು ಸಾಧಿಸಲು ಸುಲಭವಾಯಿತು.

ಕೊನೆಯಲ್ಲಿ ನಿಕಲಸ್ ಪೂರನ್ 15 ಎಸೆತಗಳಲ್ಲಿ 34 ರನ್ ಗಳಿಸಿದ್ದರಿಂದ ಸ್ಟಾಯ್ನಿಸ್ ಹಾದಿ ಸುಗಮವಾಯಿತು. ಇತ್ತ ಚೆನ್ನೈ ಪರ ಮತೀಶ ಪತಿರಾಣ 2 ವಿಕೆಟ್ ಕಬಳಿಸಿದರು. ಮುಸ್ತಾಫಿಝುರ್ ರೆಹಮಾನ್, ದೀಪಕ್ ಚಹರ್ ತಲಾ 1 ವಿಕೆಟ್ ಕಬಳಿಸಿದರು. ಅಂತಿಮವಾಗಿ 19.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿತು.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾ ಘೋಷಣೆ ಯಾವಾಗ ಎಂಬುದಕ್ಕೆ ಇಲ್ಲಿದೆ ಉತ್ತರ