Publish Date: Sun, 30 Apr 2023 (06:50 IST)
Updated Date: Sun, 30 Apr 2023 (07:16 IST)
ಚೆನ್ನೈ: ಐಪಿಎಲ್ 2023 ರಲ್ಲಿ ಪ್ರಬಲ ತಂಡವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂದು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಪಂದ್ಯವಾಡಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಇದುವರೆಗೆ ತಾನಾಡಿದ 8 ಪಂದ್ಯಗಳ ಪೈಕಿ 6 ರಲ್ಲಿ ಗೆಲುವು ಕಂಡಿದೆ. ಕಳೆದ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಅಚ್ಚರಿಯ ಸೋಲು ಅನುಭವಿಸಿತ್ತು. ಆದರೆ ಧೋನಿ ಪಡೆ ಪ್ರಬಲವಾಗಿದ್ದು ಇಂದು ಕಮ್ ಬ್ಯಾಕ್ ಮಾಡುವ ಸಾಧ್ಯತೆಯಿದೆ.
ಅತ್ತ ಶಿಖರ್ ಧವನ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ಕಳೆದ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. ಇದುವರೆಗೆ ತಾನಾಡಿದ 7 ಪಂದ್ಯಗಳ ಪೈಕಿ ಪಂಜಾಬ್ 4 ಗೆಲುವು ಸಿಕ್ಕಿದೆ. ಇಂದೂ ಚೆನ್ನೈ ಮೇಲೆ ಸವಾರಿ ಮಾಡುವ ವಿಶ್ವಾಸದಲ್ಲಿದೆ. ಈ ಪಂದ್ಯ ಅಪರಾಹ್ನ 3.30 ಕ್ಕೆ ಆರಂಭವಾಗುವುದು.