Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

INDvAFG T20I: ಟೀಂ ಇಂಡಿಯಾ ಇಂದಿನ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ?

India, Afghanistan, India vs Afghanistan T20, Cricket News, Webdunia Malayalam

Krishnaveni K

ಬೆಂಗಳೂರು , ಬುಧವಾರ, 17 ಜನವರಿ 2024 (08:47 IST)
ಬೆಂಗಳೂರು: ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಇಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಮೂರು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯ ನಡೆಯಲಿದೆ.

ಈಗಾಗಲೇ ಟೀಂ ಇಂಡಿಯಾ ಸರಣಿ ಗೆದ್ದಿರುವುದರಿಂದ ಇಂದಿನ ಪಂದ್ಯದಲ್ಲಿ ಅವಕಾಶ ಸಿಗದ ಪ್ರತಿಭೆಗಳಿಗೆ ಅವಕಾಶ ನೀಡುವ ಸಾಧ‍್ಯತೆಯಿದೆ. ಈಗಾಗಲೇ ನಾಯಕ ರೋಹಿತ್ ಶರ್ಮಾ ಈ ಬಗ್ಗೆ ಸುಳಿವು ನೀಡಿದ್ದರು.

ಕಳೆದ ಎರಡು ಪಂದ್ಯಗಳಿಂದ ವಿಕೆಟ್ ಕೀಪರ್ ಆಗಿ ಜಿತೇಶ್ ಶರ್ಮ ಕಣಕ್ಕಿಳಿದಿದ್ದರು. ಆದರೆ ಆಫ್ರಿಕಾ ಏಕದಿನ ಸರಣಿಯಲ್ಲಿ ಶತಕ ಸಿಡಿಸಿದ್ದ ಸಂಜು ಸ್ಯಾಮ್ಸನ್ ಗೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಇಂದು ಅವರು ವಿಕೆಟ್ ಕೀಪಿಂಗ್ ಮಾಡುವ ಸಾಧ್ಯತೆಯಿದೆ. ಕಳೆದ ಪಂದ್ಯದಲ್ಲಿ ಶುಬ್ಮನ್ ಗಿಲ್ ಹೊರಗುಳಿದಿದ್ದರು. ಈ ಪಂದ್ಯದಲ್ಲೂ ಅವರು ತಂಡಕ್ಕೆ ಬರುವುದು ಅನುಮಾನ.

ಶಿವಂ ದುಬೆ ಕಳೆದ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್, ಬೌಲಿಂಗ್ ನಲ್ಲಿ ಉಪಯುಕ್ತ ಆಟಗಾರನಾಗಿ ಹೊರಹೊಮ್ಮಿದ್ದರು. ಹೀಗಾಗಿ ಅವರು ತಂಡದಲ್ಲಿರಲಿದ್ದಾರೆ. ಉಳಿದಂತೆ ಬೌಲಿಂಗ್ ನಲ್ಲಿ ಮುಕೇಶ್ ಕುಮಾರ್ ಸ್ಥಾನಕ್ಕೆ ಆವೇಶ್ ಖಾನ್ ಗೆ ಅವಕಾಶ ಸಿಗಬಹುದು. ಕುಲದೀಪ್ ಗಾಗಿ ರವಿ ಬಿಷ್ಣೋಯ್ ಸ್ಥಾನ ತ್ಯಾಗ ಮಾಡುವ ಸಾಧ‍್ಯತೆ ಇಲ್ಲದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

INDvAFG T20I: ಬೆಂಗಳೂರಿನಲ್ಲಿ ಇಂದು ಔಪಚಾರಿಕ ಪಂದ್ಯ