Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಫೆಬ್ರವರಿಯಲ್ಲಿ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್

ಫೆಬ್ರವರಿಯಲ್ಲಿ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್
NewDelhi , ಶುಕ್ರವಾರ, 21 ಅಕ್ಟೋಬರ್ 2016 (13:13 IST)
ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಫೆಬ್ರವರಿಯಲ್ಲಿ ಟೆಸ್ಟ್ ಕ್ರಿಕೆಟ್ ಸರಣಿ ನಡೆಯಲಿದ್ದು ಬಿಸಿಸಿಐ ಪಂದ್ಯ ನಡೆಯುವ ಮೈದಾನಗಳನ್ನು ಪ್ರಕಟಿಸಿದೆ.

ಫೆಬ್ರವರಿ 23 ರಿಂದ ಆರಂಭವಾಗುವ ಟೆಸ್ಟ್ ಸರಣಿಯ ಪಂದ್ಯಗಳು ಇದೇ ಮೊದಲ ಬಾರಿಗೆ ಪುಣೆ, ರಾಂಚಿ ಮತ್ತು ಧರ್ಮಶಾಲಾ ಮೈದಾನದಲ್ಲೂ ನಡೆಯಲಿದೆ. ಬಾರ್ಡರ್ ಗವಾಸ್ಕರ್ ಸರಣಿಯ ಮೊದಲ ಪಂದ್ಯ ಪೆಬ್ರವರಿ 23-27 ರವರೆಗೆ ಪುಣೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಎರಡನೇ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್ 4 ರಿಂದ ಆರಂಭವಾಗಲಿದೆ.  ನಂತರದ ಎರಡು ಪಂದ್ಯಗಳು ರಾಂಚಿ ಮತ್ತು ಧರ್ಮಶಾಲಾದಲ್ಲಿ ನಡೆಯಲಿದೆ. 

ಕಳೆದ ಬಾರಿ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ –ಗವಾಸ್ಕರ್ ಸರಣಿಯಲ್ಲಿ ಅತಿಥೇಯ ತಂಡ, ಟೀಂ ಇಂಡಿಯಾವನ್ನು 4-0 ಅಂತರದಿಂದ ವೈಟ್ ವಾಷ್ ಮಾಡಿತ್ತು. ಈ ಋತುವಿನಲ್ಲಿ ತವರಿನಲ್ಲಿ ಭಾರತ ಒಟ್ಟು 13 ಟೆಸ್ಟ್, 8 ಏಕದಿನ ಮತ್ತು 3 ಟಿ-ಟ್ವೆಂಟಿ ಪಂದ್ಯಗಳನ್ನಾಡಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಸಿಐಗೆ ಮತ್ತೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್