ನವದೆಹಲಿ: ಸುಪ್ರೀಂ ಕೋರ್ಟ್ ಮತ್ತೆ ಬಿಸಿಸಿಐಗೆ ಚಾಟಿ ಬೀಸಿದೆ. ಕ್ರಿಕೆಟ್ ನಿಯಂತ್ರಣ ಮಂಡಳಿಯ ಹಣಕಾಸು ವ್ಯವಹಾರದ ಮೇಲೆ ಹಿಡಿತ ಸಾಧಿಸುವಂತಹ ನಿರ್ಣಯ ಕೈಗೊಂಡಿದೆ.
ಇದರೊಂದಿಗೆ ನ್ಯಾಯಾಲಯ ನೇಮಿಸಿದ ಲೋಧಾ ಸಮಿತಿ ಮತ್ತೆ ಕ್ರಿಕೆಟ್ ದೊರೆಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಗುತ್ತಿಗೆಗಳನ್ನು ಪರಿಶೀಲಿಸಲು ಲೋಧಾ ಸಮಿತಿ ಸ್ವತಂತ್ರ ಲೆಕ್ಕ ಪರಿಶೋಧಕರನ್ನು ನೇಮಿಸಲಿದೆ. ಅದರ ಗಮನಕ್ಕೆ ಬಾರದೇ ಗುತ್ತಿಗೆ ವ್ಯವಹಾರಗಳನ್ನು ನಡೆಸುವಂತಿಲ್ಲ ಎಂದಿದೆ.
ರಾಜ್ಯ ಯೂನಿಟ್ ಗಳು ಅಫಿಡವಿಟ್ ಸಲ್ಲಿಸದೇ ಹಣ ಬಿಡುಗಡೆ ಮಾಡಬಾರದೂ ಎಂದು ಬಿಸಿಸಿಐಗೆ ಸುಪ್ರೀಂಕೋರ್ಟ್ ಸೂಚಿಸಿದೆ. ಹೀಗಾಗಿ ಈಗ ಮತ್ತೆ ಬಿಸಿಸಿಐ ಸಂಕಷ್ಟದಲ್ಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ