ಯುಎಇ: ಮಹಿಳೆಯರ ಟಿ20 ವಿಶ್ವಕಪ್ ಗೆ ನಿನ್ನೆ ಚಾಲನೆ ಸಿಕ್ಕಿದ್ದು, ಇಂದು ಭಾರತ ಮಹಿಳೆಯರ ತಂಡ ಮೊದಲ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯದ ವಿವರ ಇಲ್ಲಿದೆ.
ಹರ್ಮನ್ ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡ ಇತ್ತೀಚೆಗಿನ ಸಮಯದಲ್ಲಿ ಉತ್ತಮ ಪ್ರದರ್ಶನ ತೋರುತ್ತಾ ಬಂದಿದೆ. ಅದರಲ್ಲೂ ಡಬ್ಲ್ಯುಪಿಎಲ್ ಆರಂಭವಾದ ಮೇಲೆ ಮಹಿಳೆಯರ ಕ್ರಿಕೆಟ್ ಮತ್ತಷ್ಟು ಸುಧಾರಣೆಯಾಗಿದೆ. ಭಾರತ ತಂಡಕ್ಕೆ ಹೊಸ ಪ್ರತಿಭೆಗಳು ಸಿಕ್ಕಿದ್ದಾರೆ.
ಐಸಿಸಿ ಟೂರ್ನಮೆಂಟ್ ಗಳಲ್ಲಿ ಭಾರತ ಮಹಿಳಾ ತಂಡಕ್ಕೆ ಇದುವರೆಗೆ ಒತ್ತಡ ನಿಭಾಯಿಸುವದೇ ಸವಾಲಾಗಿತ್ತು. ಇದರಿಂದಲೇ ಬಿಗ್ ಟೂರ್ನಿಗಳಲ್ಲಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಡಬ್ಲ್ಯುಪಿಎಲ್ ನಲ್ಲಿ ಇಂತಹ ಪ್ರದರ್ಶನ್ ಗಳನ್ನು ಕೊಟ್ಟು ವನಿತೆಯರ ತಂಡಕ್ಕೆ ಉತ್ತಮ ಅನುಭವವಾಗಿದೆ. ಹೀಗಾಗಿ ಈ ಬಾರಿಯಾದರೂ ಪ್ರಶಸ್ತಿ ಗೆಲ್ಲುವ ವಿಶ್ವಾಸ ಅಭಿಮಾನಿಗಳದ್ದಾಗಿದೆ.
ಭಾರತ ತಂಡದಲ್ಲಿ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ, ಶಫಾಲಿ ವರ್ಮ, ರಿಚಾ ಘೋಷ್ ಇತ್ತೀಚೆಗಿನ ದಿನಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಕಳೆದ ಬಾರಿ ಶ್ರೀಲಂಕಾದಲ್ಲಿ ಏಷ್ಯಾ ಕಪ್ ಟೂರ್ನಿಗಳಲ್ಲಿ ಈ ಬ್ಯಾಟಿಗರು ಮಿಂಚಿದ್ದರು. ಬೌಲಿಂಗ್ ನಲ್ಲಿ ಆಶಾ ಶೋಭನಾ, ದೀಪ್ತಿ ಶರ್ಮಾ, ರಾಧಾ ಯಾದವ್ ನಂತಹ ಬೌಲರ್ ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಅತ್ತ ನ್ಯೂಜಿಲೆಂಡ್ ಕೂಡಾ ಪ್ರಬಲ ತಂಡವಾಗಿದೆ. ಆದರೆ ಒತ್ತಡವನ್ನು ಮೀರಿ ಆಡಿದರೆ ಭಾರತಕ್ಕೆ ನ್ಯೂಜಿಲೆಂಡ್ ಸೋಲಿಸುವುದು ಕಷ್ಟವಾಗದು. ಈ ಪಂದ್ಯ 7.30 ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ ನಲ್ಲಿ ಅಥವಾ ಡಿಸ್ನಿ ಹಾಟ್ ಸ್ಟಾರ್ ಆಪ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.