ಬಾರ್ಬಡೋಸ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ಮೂರನೇ ಮತ್ತು ಸರಣಿ ನಿರ್ಣಾಯಕ ಕೊನೆಯ ಏಕದಿನ ಪಂದ್ಯ ನಡೆಯಲಿದೆ.
ಕಳೆದೆರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ಅತಿಯಾದ ಪ್ರಯೋಗ ಮಾಡಿ ಕೈ ಸುಟ್ಟುಕೊಂಡಿದೆ. ಜೊತೆಗೆ ದ್ರಾವಿಡ್-ರೋಹಿತ್ ಬಳಗದ ಪ್ರಯೋಗಕ್ಕೆ ತೀವ್ರ ಆಕ್ರೋಶ ಕೂಡಾ ವ್ಯಕ್ತವಾಗಿದೆ. ಸರಣಿ ಈಗ 1-1 ರಿಂದ ಸಮಬಲಗೊಂಡಿರುವುದರಿಂದ ಇಂದಿನ ಪಂಧ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಕಳೆದ ಎರಡು ಪಂದ್ಯಗಳಲ್ಲಿ ಸ್ಟಾರ್ ಬ್ಯಾಟಿಗ ವಿರಾಟ್ ಕೊಹ್ಲಿಗೆ ಬ್ಯಾಟಿಂಗ್ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್ ಗೆ ಅವಕಾಶ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ. ಕೊಹ್ಲಿ ಮತ್ತು ರೋಹಿತ್ ಪುನರಾಗಮನವಾದರೆ ಸಂಜು ಸ್ಯಾಮ್ಸನ್, ಅಕ್ಸರ್ ಪಟೇಲ್ ಮತ್ತೆ ಹೊರಗುಳಿಯಬಹುದು. ರವೀಂದ್ರ ಜಡೇಜಾ ಅಥವಾ ಕುಲದೀಪ್ ಯಾದವ್ ಗೆ ವಿಶ್ರಾಂತಿ ನೀಡಿ ಯಜುವೇಂದ್ರ ಚಾಹಲ್ ಗೆ ಅವಕಾಶ ನೀಡಿದರೂ ಅಚ್ಚರಿಯಿಲ್ಲ. ಅತ್ತ ಕಳೆದ ಪಂದ್ಯದಲ್ಲಿ ಸಿಕ್ಕ ಗೆಲುವು ವಿಂಡೀಸ್ ಆತ್ಮವಿಶ್ವಾಸ ಹೆಚ್ಚಿಸಿದೆ. ವಿಶೇಷವಾಗಿ ನಾಯಕನ ಆಟವಾಡುತ್ತಿರುವ ಶೈ ಹೋಪ್ಸ್ ಎರಡೂ ಪಂದ್ಯಗಳಲ್ಲಿ ತಂಡದ ಬ್ಯಾಟಿಂಗ್ ಆಧಾರ ಸ್ತಂಬವಾಗಿದ್ದಾರೆ. ಹೀಗಾಗಿ ಇಂದಿನ ಪಂದ್ಯವನ್ನು ಭಾರತ ಹಗುರವಾಗಿ ಕಾಣುವಂತಿಲ್ಲ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಸಂಜೆ 7 ಗಂಟೆಗೆ ಆರಂಭವಾಗುವುದು.