Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

500ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಐತಿಹಾಸಿಕ ಜಯಗಳಿಸಿದ ಭಾರತ

500ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಐತಿಹಾಸಿಕ ಜಯಗಳಿಸಿದ ಭಾರತ
ಕಾನ್ಪುರ್ , ಸೋಮವಾರ, 26 ಸೆಪ್ಟಂಬರ್ 2016 (13:37 IST)
ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ 500ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಐತಿಹಾಸಿಕ 197 ರನ್‌ಗಳ ಜಯಗಳಿಸಿ ಇತಿಹಾಸ ಸೃಷ್ಟಿಸಿದೆ.
ಭಾರತ ನೀಡಿದ 434 ರನ್‌ಗಳ ಸವಾಲನ್ನು ಬೆನ್ನಟ್ಟಿದ ನ್ಯೂಜಿಲೆಂಡ್, ಭಾರತ ನೀಡಿದ ಟಾರ್ಗೆಟ್ ತಲುಪಲು ವಿಫಲವಾಗಿ 197 ರನ್‌ಗಳಿಂದ ಸೋಲು ಕಂಡಿತು. ಇದರೊಂದಿಗೆ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ 1-0 ದಿಂದ ಮುನ್ನಡೆ ಸಾಧಿಸಿದೆ.    
ಇಂದು ಬೆಳಿಗ್ಗೆ ಪಂದ್ಯ ಆರಂಭವಾಗುತ್ತಿದ್ದಂತೆ ಮೊಹಮ್ಮದ್ ಶಮಿ ಬೇಗನೆ ನ್ಯೂಜಿಲೆಂಡ್‌ನ ಎರಡು ವಿಕೆಟ್‌ಗಳನ್ನು ಕಬಳಿಸಿವಲ್ಲಿ ಯಶಸ್ವಿಯಾದರು. ನಂತರ ರವಿಚಂದ್ರನ್ ಅಶ್ವಿನ್ ಮೂರು ವಿಕೆಟ್‌ಗಳನ್ನು ಕಬಳಿಸಿ ನ್ಯೂಜಿಲೆಂಡ್‌ ಗೆಲುವಿನ ಓಟಕ್ಕೆ ಕಡಿವಾಣ ಹಾಕಿದರು.     
 
ನ್ಯೂಜಿಲೆಂಡ್ ಪರ ಆಟಗಾರ ಮಿಶೈಲ್ ಸಾಂಟ್ನರ್ ಉತ್ತಮ ಆಟದ ಪ್ರದರ್ಶನ ನೀಡಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲವಾದರು. ನಂತರ ರೋಹಿತ್ ಶರ್ಮಾಗೆ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಮರಳಿದರು.
 
ನಾಲ್ಕು ಓವರ್‌ಗಳ ನಂತರ ಬೌಲಿಂಗ್ ಮಾಡಲು ಬಂದ ಅಶ್ವಿನ್, ನ್ಯೂಜಿಲೆಂಡ್ ಬ್ಯಾಟ್ಸ್‌ಮೆನ್ ಇಶ್ ಸೋಧಿಯನ್ನು ಬಲಿ ತೆಗೆದುಕೊಂಡರು. ತದ ನಂತರ ನೇಲ್ ವಾಗ್ನರ್ ಕೂಡಾ ಅಶ್ವಿನ್ ಬಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.   
 
ಆರಂಭದಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. ರೋಂಚಿ 120 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಒಂದು ಸಿಕ್ಸ್‌ ಸಹಾಯದಿಂದ 80 ರನ್‌ಗಳಿಸುವಲ್ಲಿ ಯಶಸ್ವಿಯಾದರು.
 
ನ್ಯೂಜಿಲೆಂಡ್ ತಂಡದ ವಿರುದ್ಧ 197 ರನ್‌ಗಳ ಭರ್ಜರಿ ಜಯಗಳಿಸಿದ ಭಾರತ, 500ನೇ ಟೆಸ್ಟ್ ಪಂದ್ಯವನ್ನು ಐತಿಹಾಸಿಕ ಜಯವನ್ನಾಗಿ ಪರಿವರ್ತಿಸಿತು.
 
ಸಂಕ್ಷಿಪ್ತ ಸ್ಕೋರ್: ಭಾರತ 377/5 ಡಿಕ್ಲೇರ್( ಪೂಜಾರಾ 78 ಸಂಟಾನೆರ್ 2/79) ಮತ್ತು 318 (ವಿಜಯ್ 65; ಬೌಲ್ಟ್ 4/67) ನ್ಯೂಜಿಲೆಂಡ್ 236 (ರೊಂಚಿ 80; ಅಶ್ವಿನ್ 6/132) ಮತ್ತು 262 (ವಿಲಿಯಮ್ಸನ್ 75; ಜಡೇಜಾ 5/73)  197 ರನ್‌ಗಳ ಗೆಲುವು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಜಪಾನ್ ಓಪನ್: ಸಾನಿಯಾ ಮಿರ್ಜಾ- ಬಾರ್ಬೊರಾ ಜೋಡಿಗೆ ಪ್ರಶಸ್ತಿ