ದುಬೈ: ಎಲ್ಲಾ ಸರಿ ಹೋಗಿದ್ದರೆ 2021 ರ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಭಾರತದಲ್ಲೇ ನಡೆಯಬೇಕಿತ್ತು. ಆದರೆ ಈಗಿನ ವಿದ್ಯಮಾನ ಗಮನಿಸಿದರೆ ಭಾರತಕ್ಕೆ ಅದು ಕೈ ತಪ್ಪುವ ಎಲ್ಲಾ ಲಕ್ಷಣಗಳು ತೋರುತ್ತಿವೆ.
ಚಾಂಪಿಯನ್ಸ್ ಟ್ರೋಫಿ ಆಯೋಜಿಸುವ ರಾಷ್ಟ್ರ ತನ್ನ ದೇಶದ ಸರ್ಕಾರದಿಂದ ತೆರಿಗೆ ವಿನಾಯ್ತಿ ಪಡೆಯಬೇಕು. ಆದರೆ ಭಾರತ ಸರ್ಕಾರ ಇದಕ್ಕೆ ಒಪ್ಪುತ್ತಿಲ್ಲ. ಇದೇ ಕಾರಣಕ್ಕೆ ಐಸಿಸಿ ಭಾರತದ ಬದಲು ಬೇರೊಂದು ರಾಷ್ಟ್ರದ ಕಡೆಗೆ ಗಮನ ನೆಟ್ಟಿದೆ.
ಈಗಾಗಲೇ ಬಿಸಿಸಿಐ ಕೇಂದ್ರ ಸರ್ಕಾರದ ಜತೆ ಈ ಕುರಿತು ಮಾತುಕತೆ ನಡೆಸುವುದಾಗಿ ಹೇಳಿದೆಯಾದರೂ ಅದರ ನಡುವೆ ಬದಲಿ ರಾಷ್ಟ್ರವೊಂದನ್ನು ಗುರುತಿಸಲು ಐಸಿಸಿ ಹೊರಟಿದೆ. ಒಂದು ವೇಳೆ ಕೇಂದ್ರ ಯಾವುದೇ ಕಾರಣಕ್ಕೂ ತೆರಿಗೆ ವಿನಾಯ್ತಿ ನೀಡಲು ಒಪ್ಪದೇ ಹೋದಲ್ಲಿ ಚಾಂಪಿಯನ್ಸ್ ಟ್ರೋಫಿ ಬೇರೆ ದೇಶದ ಪಾಲಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ