ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿಂದು ಭಾರತ-ಇಂಗ್ಲೆಂಡ್ ಗೆ ಇಂದು ಎರಡನೇ ಏಕದಿನ ಪರೀಕ್ಷೆ

Webdunia
ಗುರುವಾರ, 14 ಜುಲೈ 2022 (08:30 IST)
ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದು ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಎರಡನೇ ಏಕದಿನ ಪಂದ್ಯ ನಡೆಯಲಿದೆ.

ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಎಲ್ಲಾ ವಿಭಾಗದಲ್ಲಿ ಪ್ರಚಂಡ ಪ್ರದರ್ಶನ ನೀಡಿದ್ದರು. ಅದರಲ್ಲೂ ಅನುಭವಿ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಬೌಲಿಂಗ್ ನಲ್ಲಿ ಮಿಂಚಿದರೆ ಹಳೆಯ ಆರಂಭಿಕ ಜೋಡಿ ರೋಹಿತ್ ಶರ್ಮಾ-ಶಿಖರ್ ಧವನ್ ಬ್ಯಾಟಿಂಗ್ ನಲ್ಲಿ ಮಿಂಚಿದ್ದರು.

ಇಂಗ್ಲೆಂಡ್ ನ ಪಿಚ್ ಗಳಲ್ಲಿ ಟಾಸ್ ನಿರ್ಣಾಯಕ ಪಾತ್ರ ವಹಿಸುತ್ತದೆ. ಇದಕ್ಕೆ ಕಳೆದ ಪಂದ್ಯವೇ ಸಾಕ್ಷಿ. ಇಲ್ಲಿನ ಹಸಿರು ಪಿಚ್ ಗಳಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಿದರೆ ಗೆಲ್ಲುವ ಅವಕಾಶ ಹೆಚ್ಚು. ಹೀಗಾಗಿ ಇಂದಿನ ಪಂದ್ಯದಲ್ಲಿ ರೋಹಿತ್ ಟಾಸ್ ಗೆದ್ದರೆ ಅರ್ಧ ಪಂದ್ಯ ಗೆದ್ದಂತೆಯೇ ಸರಿ. ಆದರೆ ಘಟಾನುಘಟಿ ಆಟಗಾರರನ್ನು ಹೊಂದಿರುವ ಅತಿಥೇಯರು ಯಾವುದೇ ಕ್ಷಣದಲ್ಲಿ ತಿರುಗಿಬೀಳಬಹುದು. ಹೀಗಾಗಿ ಟೀಂ ಇಂಡಿಯಾ ಎಚ್ಚರ ತಪ್ಪುವಂತಿಲ್ಲ. ಇಂದಿನ ಪಂದ್ಯಕ್ಕೆ ರೋಹಿತ್ ಪಡೆಯಲ್ಲಿ ಯಾವುದೇ ಬದಲಾವಣೆಯಾಗುವ ಸಾಧ‍್ಯತೆಯಿಲ್ಲ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಸಂಜೆ 5.30 ಕ್ಕೆ ಆರಂಭವಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AFG: ಟೀಂ ಇಂಡಿಯಾ ಗೆಲುವಿಗೆ 219 ರನ್ ಗಳ ಗುರಿ ನೀಡಿದ ಅಫ್ಘಾನಿಸ್ತಾನ: ಪ್ರಸಿದ್ಧ ಕೃಷ್ಣ ಭರ್ಜರಿ ಸಾಧನೆ

IND vs AFG: ಮೂರನೇ ಏಕದಿನದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನದ ಆಯ್ಕೆ ಏನು

ಟೀಮ್ ಇಂಡಿಯಾಗೆ ಕಿಂಗ್ ಕೊಹ್ಲಿ ಮರಳೋದು ಯಾವಾಗ

IND vs AFG: ಟೀಂ ಇಂಡಿಯಾಗೆ ಅಫ್ಘಾನಿಸ್ತಾನದ ವಿರುದ್ಧ ಕ್ಲೀನ್ ಸ್ವೀಪ್ ಗುರಿ

ಶ್ರೇಯಾಂಕ ಪಾಟೀಲ್ ಅಂದುಕೊಂಡಿದ್ದು ಆಗಲೇ ಇಲ್ಲ: ವಿಶ್ವಕಪ್ ನಿಂದಲೇ ಔಟ್

ಮುಂದಿನ ಸುದ್ದಿ
Show comments