ಮೊಹಾಲಿ: ಏಷ್ಯಾ ಕಪ್ ಕೂಟವಿಡೀ ಟೀಂ ಇಂಡಿಯಾ ಮಳೆಯ ಕಾಟದ ನಡುವೆಯೇ ಆಡಿ ಫೈನಲ್ ಗೆದ್ದುಕೊಂಡಿತ್ತು. ಇದೀಗ ಏಷ್ಯಾ ಕಪ್ ಮುಗಿದು ಆಸ್ಟ್ರೇಲಿಯಾ ವಿರುದ್ಧ ಭಾರತದಲ್ಲೇ ಏಕದಿನ ಸರಣಿ ನಡೆಯುತ್ತಿದ್ದರೂ ಮಳೆ ಮಾತ್ರ ಬೆಂಬಿಡದೇ ಕಾಡುತ್ತಿದೆ.
ಮೊಹಾಲಿಯಲ್ಲಿ ಇಂದು ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಮೊದಲ ಏಕದಿನ ಪಂದ್ಯವಾಡುತ್ತಿದೆ. ಆರಂಭದಲ್ಲಿ ಮೈದಾನದ ಸುತ್ತುಮುತ್ತ ಬಿಸಿಲಿನ ವಾತಾವರಣವೇ ಇತ್ತು. ಆದರೆ ಆಸೀಸ್ ಇನಿಂಗ್ಸ್ ನ 36 ನೇ ಓವರ್ ವೇಳೆ ದಟ್ಟ ಮೋಡ ಕಾಣಿಸಿಕೊಂಡಿದ್ದು ಸಣ್ಣದಾಗಿ ಹನಿ ಹನಿಯಲು ಆರಂಭವಾಗಿತ್ತು. ಹೀಗಾಗಿ ತಕ್ಷಣವೇ ಅಂಪಾಯರ್ ಗಳು ಪಂದ್ಯ ಕೆಲವು ಕಾಲ ಸ್ಥಗಿತಗೊಳಿಸಿದ್ದಾರೆ.
ಆದರೆ ಕೆಲವೇ ಕ್ಷಣಗಳಲ್ಲಿ ಮಳೆ ಹನಿ ನಿಂತಿದ್ದರಿಂದ ಕವರ್ಸ್ ತೆಗೆಯಲಾಗಿದ್ದು, ಮತ್ತೆ ಪಂದ್ಯ ಆರಂಭವಾಗುವ ಸೂಚನೆ ಸಿಕ್ಕಿದೆ. ಆದರೆ ಕೊಲೊಂಬೋದಲ್ಲಿ ಕಾಡಿದ್ದ ಮಳೆ ಮೊಹಾಲಿಗೆ ಬಂದರೂ ಟೀಂ ಇಂಡಿಯಾ ಬೆನ್ನು ಬಿಟ್ಟಿಲ್ಲ.