ಮೊಹಾಲಿ: ಐಸಿಸಿ ಏಕದಿನ ವಿಶ್ವಕಪ್ ಗೆ ಕೆಲವೇ ದಿನಗಳು ಬಾಕಿಯಿದ್ದು, ಇಂದಿನಿಂದ ಭಾರತ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಆಡಲಿದೆ.
ಮೂರು ಪಂದ್ಯಗಳ ಏಕದಿನ ಸರಣಿ ಇದಾಗಿದ್ದು, ಮೊದಲ ಎರಡು ಪಂದ್ಯಗಳಿಗೆ ಕೆಎಲ್ ರಾಹುಲ್ ನೇತೃತ್ವದ ತಂಡ ಕಣಕ್ಕಿಳಿಯಲಿದೆ. ಈ ಎರಡು ಪಂದ್ಯಗಳಿಗೆ ವಿಶ್ವಕಪ್ ಆಡುವ ಪ್ರಮುಖರಿಗೆ ವಿಶ್ರಾಂತಿ ನೀಡಲಾಗಿದೆ.
ಇಂದಿನ ಪಂದ್ಯ ಮೊಹಾಲಿಯಲ್ಲಿ ನಡೆಯಲಿದೆ. ಭಾರತ ತಂಡದಲ್ಲಿ ಇಂದು ಆರಂಭಿಕರಾಗಿ ಶುಬ್ಮನ್ ಗಿಲ್ ಜೊತೆ ಋತುರಾಜ್ ಗಾಯಕ್ ವಾಡ್ ಕಣಕ್ಕಿಳಿಯುವ ನಿರೀಕ್ಷೆಯಿದೆ. ಗಾಯಗೊಂಡಿದ್ದ ಶ್ರೇಯಸ್ ಅಯ್ಯರ್ ಕಮ್ ಬ್ಯಾಕ್ ಮಾಡಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಜೋಡಿ ಕಣಕ್ಕಿಳಿಯಬಹುದು. ಆಲ್ ರೌಂಡರ್ ಆಗಿ ವಾಷಿಂಗ್ಟನ್ ಸುಂದರ್ ಗೆ ಅವಕಾಶ ಸಿಕ್ಕರೂ ಅಚ್ಚರಿಯಿಲ್ಲ. ವೇಗದ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಇದ್ದರೂ ಅವರನ್ನು ಕಣಕ್ಕಿಳಿಸುವ ಸಾಧ‍್ಯತೆ ಕಡಿಮೆ. ಹಾಗಿದ್ದಲ್ಲಿ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಗೆ ಕಣಕ್ಕಿಳಿಯಬಹುದು. ಅತ್ತ ಆಸ್ಟ್ರೇಲಿಯಾ ಕೂಡಾ ವಿಶ್ವಕಪ್ ಆಡುವ ಆಟಗಾರರನ್ನೊಳಗೊಂಡ ಸಮರ್ಥ ತಂಡವನ್ನೇ ಕಟ್ಟಿಕೊಂಡು ಬಂದಿದೆ. ಹೀಗಾಗಿ ಈ ಸರಣಿಯಲ್ಲಿ ಪೈಪೋಟಿ ಎದುರಾಗಬಹುದು. ಈ ಪಂದ್ಯ ಮಧ್ಯಾಹ್ನ 1.30 ಕ್ಕೆ ಆರಂಭವಾಗುವುದು. ಜಿಯೋ ಆಪ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.