Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

46ಕ್ಕೆ ಭಾರತ ಆಲೌಟ್‌: ಟೆಸ್ಟ್‌ನಲ್ಲಿ 3ನೇ ಅತೀ ಕಡಿಮೆ ರನ್‌ ಗಳಿಸಿದ ಟೀ ಇಂಡಿಯಾ

46ಕ್ಕೆ ಭಾರತ ಆಲೌಟ್‌:  ಟೆಸ್ಟ್‌ನಲ್ಲಿ 3ನೇ ಅತೀ ಕಡಿಮೆ ರನ್‌ ಗಳಿಸಿದ ಟೀ ಇಂಡಿಯಾ

Sampriya

ಬೆಂಗಳೂರು , ಗುರುವಾರ, 17 ಅಕ್ಟೋಬರ್ 2024 (14:06 IST)
Photo Courtesy X
ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 46 ರನ್‌ಗಳಿಗೆ ಭಾರತ ಕುಸಿದಿದೆ. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ 3ನೇ ಅತೀ ಕಡಿಮೆ ರನ್‌ ಗಳಿಸಿದ ಕೆಟ್ಟ ದಾಖಲೆಗೆ ಪಾತ್ರವಾಯಿತು.

ಭಾರತ ತಂಡ ಅತ್ಯಂತ ಕಳಪೆ ಪ್ರದರ್ಶನ ಇದಾಗಿದೆ. ವಿಲಿಯಂ ಓ’ರೂರ್ಕ್ ಮ್ಯಾಟ್‌ ಹೆನ್ರಿ ವೇಗಿಗಳ ಆರ್ಭಟಕ್ಕೆ ನಲುಗಿದ ಟೀಂ ಇಂಡಿಯಾ ಭಾರೀ ಮುಖಭಂಗ ಅನುಭವಿಸಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತೀ ಕೆಟ್ಟ ದಾಖಲೆಯೊಂದನ್ನು ಹೆಗಲಿಗೇರಿಸಿಕೊಂಡಿದೆ.

ಮೊದಲ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಟೀಂ ಇಂಡಿಯಾ ಕಿವೀಸ್‌ ವೇಗಿಗಳ ಅಬ್ಬರಕ್ಕೆ ಮಕಾಡೆ ಮಲಗಿತು. ನಿಧಾನಗತಿ ಬ್ಯಾಟಿಂಗ್‌ ಆರಂಭಿಸಿದ ಭಾರತ ಒಂದೊಂದು ಕದಿಯಲು ತಿಣುಕಾಡಿತು. ರೋಹಿತ್‌, ಕೊಹ್ಲಿ, ರಾಹುಲ್‌ ಸೇರಿದಂತೆ ಅಗ್ರಕ್ರಮಾಂಕದ ಬ್ಯಾಟರ್‌ಗಳು ಬಹುಬೇಗನೆ ಪೆವಿಲಿಯನ್‌ ಪರೇಡ್‌ ನಡೆಸಿದರು.  

2020ರಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 36 ರನ್‌ಗೆ ಆಲೌಟ್‌ ಆಗಿದ್ದು ಅತ್ಯಂಕ ಕಡಿಮೆ ಮೊತ್ತ ದಾಖಲೆಯಾದರೆ, 1974ರಲ್ಲಿ ಇಂಗ್ಲೆಂಡ್‌ ವಿರುದ್ಧ 42 ರನ್‌ಗಳಿಸಿ ಕುಸಿದಿದ್ದು ಎರಡನೇ ದಾಖಲೆಯಾಗಿದೆ. ಇದೀಗ ಮೂರನೇ ಅತಿ ಕಡಿಮೆ ರನ್‌ ದಾಖಲೆಗೆ ಪಾತ್ರವಾಗಿದೆ.

ಟೀಂ ಇಂಡಿಯಾ ಪರ ರಿಷಭ್‌ ಪಂತ್‌ 20 ರನ್‌, ಯಶಸ್ವಿ ಜೈಸ್ವಾಲ್‌ 13 ರನ್‌ ಗಳಿದರು. ಉಳಿದ ಆಟಗಾರರು ಅಲ್ಪ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿ ಹೊರನಡೆದರು. ರೋಹಿತ್‌ ಶರ್ಮಾ 2ರನ್‌, ಕುಲೀಪ್‌ ಯಾದವ್‌ 2ರನ್‌, ಜಸ್ಪ್ರೀತ್‌ ಬುಮ್ರಾ 1 ರನ್‌, ಸಿರಾಜ್‌ 4 ರನ್‌ ಗಳಿಸಿದರು. ಇನ್ನುಳಿದಂತೆ ವಿರಾಟ್‌ ಕೊಹ್ಲಿ, ಸರ್ಫರಾಜ್‌ ಖಾನ್‌, ಕೆ.ಎಲ್‌ ರಾಹುಲ್‌, ರವೀಂದ್ರ ಜಡೇಜಾ, ರವಿಚಂದ್ರನ್‌ ಅಶ್ವಿನ್‌ ಶೂನ್ಯ ಸುತ್ತಿದರು.

ಮಾರಕ ದಾಳಿ ನಡೆಸಿದ ವೇಗಿ ಮ್ಯಾಕ್‌ ಹೆನ್ರಿ 13.2 ಓ ವರ್‌ಗಳಲ್ಲಿ 15 ರನ್‌ ಬಿಟ್ಟುಕೊಟ್ಟು 5 ವಿಕೆಟ್‌ ಕಿತ್ತರೆ, ವಿಲಿಯಂ ಓ’ರೂರ್ಕ್ 12 ಓವರ್‌ಗಳಲ್ಲಿ 22 ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಹಾಗೂ ಟಿಮ್‌ ಸೌಥಿ ಒಂದು ವಿಕೆಟ್‌ ಕಿತ್ತರು.

Share this Story:

Follow Webdunia kannada

ಮುಂದಿನ ಸುದ್ದಿ

IND vs NZ Test: ಕಿಂಗ್ ಕೊಹ್ಲಿ ಎಂದು ಮೆರೆಸಿದ್ದಷ್ಟೇ ಬಂತು, ಬೆಂಗಳೂರಿನಲ್ಲೇ ಡುಮ್ಕಿ