Webdunia - Bharat's app for daily news and videos

Install App

IND vs ZIM: ಮೊದಲ ಪಂದ್ಯದಲ್ಲೇ ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾಗೆ ಆಘಾತ

Krishnaveni K
ಶನಿವಾರ, 6 ಜುಲೈ 2024 (20:17 IST)
Photo Credit: X
ಹರಾರೆ: ಜಿಂಬಾಬ್ವೆ ವಿರುದ್ಧ ನಡೆದ ಮೊದಲ ಟಿ20 ಪಂದ್ಯವನ್ನು ಆಘಾತಕಾರಿಯಾಗಿ ಸೋತ ಟೀಂ ಇಂಡಿಯಾ ಆಘಾತ ಅನುಭವಿಸಿದೆ. ಈ ಪಂದ್ಯವನ್ನು ಟೀಂ ಇಂಡಿಯಾ 13 ರನ್ ಗಳಿಂದ ಸೋತಿದೆ.

ಈ ಸೋಲಿನೊಂದಿಗೆ ಇತ್ತೀಚೆಗಿನ ಟಿ20 ವಿಶ್ವಕಪ್ ಕೂಟವೂ ಸೇರಿ ಸತತವಾಗಿ 12 ಪಂದ್ಯಗಳಿಂದ ಗೆಲ್ಲುತ್ತಾ ಬಂದಿದ್ದ ಟೀಂ ಇಂಡಿಯಾದ ಗೆಲುವಿನ ಸರಪಳಿ ಮುರಿದುಬಿದ್ದಂತಾಗಿದೆ.  ಅಲ್ಲದೆ ಈ ವರ್ಷ ಟಿ20 ಯಲ್ಲಿ ಭಾರತ ಕಂಡ ಮೊದಲ ಸೋಲಾಗಿದೆ. ಅದೂ ವಿಶ್ವ ಚಾಂಪಿಯನ್ ಆದ ಬೆನ್ನಲ್ಲೇ ಭಾರತ ಇಂತಹದ್ದೊಂದು ಮುಖಭಂಗ ಅನುಭವಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್ ದಾಳಿಗೆ ತತ್ತರಿಸಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೊತ್ತವನ್ನು ಭಾರತದ ಪ್ರತಿಭಾವಂತ ಯುವ ಬ್ಯಾಟಿಗರು ಸುಲಭವಾಗಿ ಬೆನ್ನತ್ತಬಹುದು ಎಂದೇ ಎಲ್ಲರ ನಿರೀಕ್ಷೆಯಾಗಿತ್ತು.

ಆದರೆ ಭಾರತದ ಟಾಪ್ ಆರ್ಡರ್ ಕೈ ಕೊಟ್ಟಿದ್ದರಿಂದ ಎಲ್ಲಾ ಲೆಕ್ಕಾಚಾರಗಳೂ ಉಲ್ಟಾ ಆಯಿತು. ನಾಯಕ ಶುಬ್ಮನ್ ಗಿಲ್ 31, ವಾಷಿಂಗ್ಟನ್ ಸುಂದರ್ 27 ರನ್, ಆವೇಶ್ ಖಾನ್ 16 ರನ್ ಗಳಿಸಿದ್ದು ಬಿಟ್ಟರೆ ಉಳಿದೆಲ್ಲರದ್ದು ಏಕಂಕಿ ಕೊಡುಗೆ. ಜಿಂಬಾಬ್ವೆ ಪರ ತೆಂಡೈ ಚತರ, ನಾಯಕ ಸಿಕಂದರ್ ರಾಝಾ  ತಲಾ 3 ವಿಕೆಟ್ ಕಬಳಿಸಿದರು. ಅಂತಿಮವಾಗಿ ಟೀಂ ಇಂಡಿಯಾ 19.5 ಓವರ್ ಗಳಲ್ಲಿ 102 ರನ್ ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments