Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

IND vs NZ Test: ಬೆಂಗಳೂರು ಪಂದ್ಯ ವಾಶ್ ಔಟ್ ಆದರೆ ಟೀಂ ಇಂಡಿಯಾದ ಡಬ್ಲ್ಯುಟಿಸಿ ಕತೆ ಏನಾಗಲಿದೆ

Rohit Sharma-Gautam Gambhir

Krishnaveni K

ಬೆಂಗಳೂರು , ಬುಧವಾರ, 16 ಅಕ್ಟೋಬರ್ 2024 (11:24 IST)
ಬೆಂಗಳೂರು: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಬೇಕಿರುವ  ಮೊದಲ ಟೆಸ್ಟ್ ಪಂದ್ಯ ಮಳೆಯಿಂದಾಗಿ ಇನ್ನೂ ಆರಂಭವಾಗಿಲ್ಲ. ಇಂದು ಪಂದ್ಯ ನಡೆಯುವುದೂ ಅನುಮಾನವಾಗಿದೆ.

ಹವಾಮಾನ ಇಲಾಖೆ ವರದಿ ಪ್ರಕಾರ ಇನ್ನೂ ಮೂರು ದಿನ ಮಳೆಯಾಗುವ ಸಾಧ್ಯತೆಯಿದೆ. ಹೀಗಾದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಚಿನ್ನಸ್ವಾಮಿ ಮೈದಾನದ ಪಂದ್ಯ ಸಂಪೂರ್ಣ ವಾಶ್ ಔಟ್ ಆಗುವ ಸಾಧ್ಯತೆಯಿದೆ. ಹೀಗಾದಲ್ಲಿ ಈ ಪಂದ್ಯ ರದ್ದಾಗುವ ಸಾಧ್ಯತೆಯೇ ಹೆಚ್ಚು.

ಒಂದು ವೇಳೆ ಪಂದ್ಯ ರದ್ದಾದರೆ ಭಾರತದ ಡಬ್ಲ್ಯುಟಿಸಿ ಫೈನಲ್ ಅಂಕಪಟ್ಟಿಗೆ ಕುತ್ತು ಬರಲಿದೆ. ಬಾಂಗ್ಲಾದೇಶ ವಿರುದ್ಧ ಎರಡೂ ಪಂದ್ಯವನ್ನು ಗೆದ್ದುಕೊಂಡಿದ್ದ ಭಾರತ ತಂಡ ಈಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನ್ಯೂಜಿಲೆಂಡ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳ ಪೈಕಿ ಎರಡು ಪಂದ್ಯಗಳನ್ನು ಗೆದ್ದು ಸರಣಿ ಗೆದ್ದಿದ್ದರೂ ಸಾಕಿತ್ತು.

ಆದರೆ ಈಗ ಮೊದಲ ಟೆಸ್ಟ್ ರದ್ದಾದರೆ ಭಾರತ ಇನ್ನುಳಿದ ಎರಡೂ ಪಂದ್ಯಗಳನ್ನು ಗೆಲ್ಲುವ ಒತ್ತಡಕ್ಕೆ ಸಿಲುಕಲಿದೆ. ಒಂದು ವೇಳೆ ನ್ಯೂಜಿಲೆಂಡ್ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡರೆ ಭಾರತದ ಗೆಲುವಿನ ಶೇಕಡಾವಾರು 79% ಆಗಲಿದೆ. ಇದರಿಂದ ಸುಲಭವಾಗಿ ಫೈನಲ್ ಗೆ ಅರ್ಹತೆ ಗಿಟ್ಟಿಸಬಹುದು. ಇತ್ತ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮುಂದೆ ಭಾರತ ವಿರುದ್ಧವೂ ಸೇರಿದಂತೆ ಆಡಲಿರುವ ಎಲ್ಲಾ 7 ಟೆಸ್ಟ್ ಪಂದ್ಯಗಳನ್ನು ಗೆಲ್ಲುವ ಒತ್ತಡಕ್ಕೆ ಸಿಲುಕಲಿದೆ. ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧ ಒಂದು ಪಂದ್ಯ ಸೋತರೂ ಅಂಕಪಟ್ಟಿಗೆ ಧಕ್ಕೆಯಾಗದು.

Share this Story:

Follow Webdunia kannada

ಮುಂದಿನ ಸುದ್ದಿ

IND vs NZ Test: ಚಿನ್ನಸ್ವಾಮಿ ಮೈದಾನ ಮಳೆಯಿಂದ ಒದ್ದೆ, ಇಂದಿನ ಪಂದ್ಯಕ್ಕೆ ಕಾರ್ಮೋಡ