Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಟೀಂ ಇಂಡಿಯಾ ವಿರುದ್ಧ ನ್ಯೂಜಿಲೆಂಡ್ ಗೆ ಐತಿಹಾಸಿಕ ಸರಣಿ ಗೆಲುವು

IND vs NZ Test

Krishnaveni K

ಪುಣೆ , ಶನಿವಾರ, 26 ಅಕ್ಟೋಬರ್ 2024 (16:06 IST)
ಪುಣೆ: ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು 113 ರನ್ ಗಳಿಂದ ಸೋಲಿಸಿದ ನ್ಯೂಜಿಲೆಂಡ್ ಭಾರತೀಯ ನೆಲದಲ್ಲಿ ಮೊದಲ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿದೆ.

ಭಾರತವನ್ನು ಭಾರತದಲ್ಲೇ ಸೋಲಿಸುವುದು ಅಷ್ಟು ಸುಲಭವಲ್ಲ. ಅದರಲ್ಲೂ ಸ್ಪಿನ್ ಪಿಚ್ ತಯಾರಿಸಿ ವಿದೇಶೀ ಆಟಗಾರರಿಗೆ ಖೆಡ್ಡಾ ತೋಡುವ ಟೀಂ ಇಂಡಿಯಾಕ್ಕೆ ಈ ಬಾರಿ ಅದುವೇ ಮುಳುವಾಗಿದೆ. ಭಾರತೀಯರನ್ನು ಸ್ಪಿನ್ ಅಸ್ತ್ರದಿಂದಲೇ ಕಿವೀಸ್ ಮಣ್ಣು ಮುಕ್ಕಿಸಿದೆ.

ಗೆಲ್ಲಲು 359 ರನ್ ಗಳ ಬೃಹತ್ ಮೊತ್ತ ಗುರಿ ಬೆನ್ನತ್ತಿದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಆರಂಭದಲ್ಲೇ ಕೈ ಕೊಟ್ಟರು. ಬಳಿಕ ಕೆಲವು ಹೊತ್ತು ಯಶಸ್ವಿ ಜೈಸ್ವಾಲ್, ಶುಬ್ಮನ್ ಗಿಲ್ ಭರವಸೆ ನೀಡಿದರಾದರೂ ಉಳಿದವರೆಲ್ಲರೂ ಮತ್ತೊಮ್ಮೆ ಪೆವಿಲಿಯನ್ ಪೆರೇಡ್ ನಡೆಸಿದರು. ಕಳೆದ ಪಂದ್ಯದಲ್ಲಿ ಹೀರೋ ಆಗಿದ್ದ ರಿಷಭ್ ಪಂತ್, ಸರ್ಫರಾಜ್ ಖಾನ್ ಇಬ್ಬರೂ ಈ ಪಂದ್ಯದಲ್ಲಿ ಕೈಕೊಟ್ಟರು.

ಕೊನೆಯಲ್ಲಿ ರವೀಂದ್ರ ಜಡೇಜಾ 42 ರನ್ ಗಳಿಸಿದರಾದರೂ ಅವರಿಗೆ ತಕ್ಕ ಸಾಥ್ ಸಿಗಲಿಲ್ಲ. ಕಿವೀಸ್ ಸ್ಯಾಂಟ್ನರ್ ಬಲೆಗೆ ಬಿದ್ದ ಟೀಂ ಇಂಡಿಯಾ ಕೇವಲ 255 ರನ್ ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್ ನಲ್ಲಿ 7 ವಿಕೆಟ್ ಕಬಳಿಸಿದ್ದ ಸ್ಯಾಂಟ್ನರ್ ಎರಡನೇ ಇನಿಂಗ್ಸ್ ನಲ್ಲಿ 6 ವಿಕೆಟ್ ಕಬಳಿಸಿ ಮಾರಕರಾದದರು.

ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ಭಾರತದಲ್ಲಿ ಮೊದಲ ಟೆಸ್ಟ್ ಸರಣಿ ಗೆದ್ದ ಇತಿಹಾಸ ನಿರ್ಮಿಸಿತು. ಇದಕ್ಕೆ ಮೊದಲು ಭಾರತ ಸ್ವದೇಶದಲ್ಲಿ ಸತತವಾಗಿ 18 ಸರಣಿಗಳನ್ನು ಗೆದ್ದುಕೊಂಡಿತ್ತು. ಆದರೆ ಇದರೊಂದಿಗೆ ಈಗ ಗೆಲುವಿನ ಸರಪಳಿ ಮುರಿದಿದೆ. ಕೊನೆಯವರಾಗಿ ಜಡೇಜಾ ಔಟಾದಾಗ ಮೈದಾನ ಸ್ತಬ್ಧವಾಗಿತ್ತು.
 

Share this Story:

Follow Webdunia kannada

ಮುಂದಿನ ಸುದ್ದಿ

IND vs NZ Test: ರೋಹಿತ್ ಶರ್ಮಾಗೊಂದು ರೂಲ್ಸ್, ಕೆಎಲ್ ರಾಹುಲ್ ಗೊಂದು ರೂಲ್ಸಾ