IND vs ENG: ಟೀಂ ಇಂಡಿಯಾಕ್ಕೆ ಇಂದು ಕೊನೆ ಚಾನ್ಸ್, ಈ ಆಟಗಾರನಿಗೆ ಕೊಕ್ ಸಾಧ್ಯತೆ

ಕೃಷ್ಣವೇಣಿ ಕೆ
ಗುರುವಾರ, 9 ಜುಲೈ 2026 (10:50 IST)
Photo Credit: X
ಬ್ರಿಸ್ಟಲ್‌: ಗ್ಲೌಸ್ಟರ್‌ಶೈರ್ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದು 4ನೇ T20 ಪಂದ್ಯ ನಡೆಯಲಿದೆ. 5 ಪಂದ್ಯಗಳ ಈ ಸರಣಿಯಲ್ಲಿ ಇಂಗ್ಲೆಂಡ್ ಈಗಾಗಲೇ 2-0 ಮುನ್ನಡೆ ಸಾಧಿಸಿದ್ದು, ಭಾರತ ತಂಡಕ್ಕೆ ಈ ಪಂದ್ಯ ಸರಣಿ ಜೀವಂತವಾಗಿರಿಸಿಕೊಳ್ಳಲು 'ಮಾಡ ಇಲ್ಲವೇ ಮಡಿ' ಹಂತ ತಲುಪಿದೆ.

3ನೇ T20 ಪಂದ್ಯದಲ್ಲಿ ಅನುಭವಿಸಿದ ಆಘಾತಕಾರಿ ಸೋಲಿನ ನಂತರ, ಶ್ರೇಯಸ್ ಅಯ್ಯರ್ ನೇತೃತ್ವದ ಭಾರತೀಯ ತಂಡದ ಪ್ಲೇಯಿಂಗ್ 11 ನಲ್ಲಿ ಕೆಲ ಪ್ರಮುಖ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಸಂಜು ಸ್ಯಾಮ್ಸನ್ ತಂಡಕ್ಕೆ ಮರಳುವ ಸಾಧ್ಯತೆಯಿದೆ.

ಕಳೆದ ಕೆಲವು ಪಂದ್ಯಗಳಿಂದ ತಿಲಕ್ ವರ್ಮ ಫಾರ್ಮ್ ಬಗ್ಗೆ ತೀವ್ರ ಟೀಕೆ ಬರುತ್ತಿದೆ. ಹೀಗಾಗಿ ತಿಲಕ್ ಗೆ ಕೊಕ್ ಕೊಟ್ಟು ಸಂಜು ಪ್ಲೇಯಿಂಗ್ 11 ಗೆ ಬಂದರೂ ಅಚ್ಚರಿಯಿಲ್ಲ. ವೈಭವ್ ಸೂರ್ಯವಂಶಿಗೆ ಎರಡು ಅವಕಾಶ ಸಿಕ್ಕಿಯೂ ಬಳಸಿಕೊಂಡಿಲ್ಲ. ಆದರೆ ಯುವ ಬ್ಯಾಟಿಗನಿಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆಯಿದೆ.

ಕಳೆದ ಕೆಲವು ಪಂದ್ಯಗಳಿಂದ ಟೀಂ ಇಂಡಿಯಾ ಪ್ರದರ್ಶನ, ಮ್ಯಾನೇಜ್ ಮೆಂಟ್ ನಿರ್ಧಾರಗಳು ಅಭಿಮಾನಿಗಳ ತೀವ್ರ ಅಸಮಾಧಾನಕ್ಕೆ ಗುರಿಯಾಗಿದೆ. ಈಗಾಗಲೇ ಜನರಲ್ಲಿ ಪಂದ್ಯ ನೋಡುವ ಆಸಕ್ತಿ ಕುಂಠಿತವಾಗಿದೆ. ವಿಶ್ವ ಚಾಂಪಿಯನ್ ಪಟ್ಟಕ್ಕೆ ತಕ್ಕ ಆಟವಾಡಲು ತಂಡದಲ್ಲಿ ಪ್ರತಿಭಾವಂತರೂ ಇದ್ದಾರೆ. ಆದರೆ ಅವರ ಪ್ರತಿಭೆಗೆ ತಕ್ಕ ಅವರು ಪ್ರದರ್ಶನ ನೀಡುತ್ತಿಲ್ಲ ಎಂಬುದೇ ವಿಪರ್ಯಾಸ. ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋತರೆ ಸತತವಾಗಿ ಎರಡನೇ ಸರಣಿ ಕಳೆದುಕೊಂಡಂತಾಗುತ್ತದೆ. ಇಂದಿನ ಪಂದ್ಯ ಭಾರತೀಯ ಕಾಲಮಾನ ರಾತ್ರಿ 10 ಗಂಟೆಗೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ಅಥವಾ ಜಿಯೋ ಹಾಟ್ ಸ್ಟಾರ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟೀಂ ಇಂಡಿಯಾ ಕೋಚ್ ಆಗಿ ಗೌತಮ್ ಗಂಭೀರ್ ಅವಧಿ ಮುಕ್ತಾಯವಾಗುವುದು ಯಾವಾಗ

ಸಚಿನ್ ತೆಂಡುಲ್ಕರ್ ದಂಪತಿ ಪಕ್ಕವೇ ಕೂತು ವಿಂಬಲ್ಡನ್ ಪಂದ್ಯ ವೀಕ್ಷಿಸಿದ ಶುಭಮನ್ ಗಿಲ್: ನೆಟ್ಟಿಗರಿಂದ ಕಾಮೆಂಟೋ ಕಾಮೆಂಟ್ Video

IND vs ENG: ಐಪಿಎಲ್ ನಲ್ಲಿ ಮಾತ್ರ ಹುಲಿ.. ಇಂಗ್ಲೆಂಡ್ ವಿರುದ್ಧ ಸೋತ ಬಳಿಕ ಗಂಭೀರ್, ಕ್ಯಾಪ್ಟನ್ ಶ್ರೇಯಸ್ ಚರ್ಚೆ ಜೋರು Video

IND vs ENG: ಹೇಗಿದ್ದ ಟೀಂ ಇಂಡಿಯಾ ಗತಿ ಹೇಗಾಗೋಯ್ತಲ್ಲಾ.. ಟೀಂ ಇಂಡಿಯಾ ಈ ಪರಿ ಸೋಲುವುದಕ್ಕೆ ಕಾರಣ ಯಾರು

ಧೋನಿ, ಕೊಹ್ಲಿ ಸೋತಿಲ್ವಾ, ಶ್ರೇಯಸ್ ಕೂಡಾ ಅವರಂತೆ ಗ್ರೇಟ್ ಕ್ಯಾಪ್ಟನ್ ಆಗ್ತಾನೆ: ಅಣ್ಣನ ಪರ ತಂಗಿ ಬ್ಯಾಟಿಂಗ್ Video

ಮುಂದಿನ ಸುದ್ದಿ
Show comments