Webdunia - Bharat's app for daily news and videos

Install App

IND vs AUS: ಮೊಹಮ್ಮದ್ ಸಿರಾಜ್ ಟ್ರಾವಿಸ್ ಹೆಡ್ ಗೆ ಸೆಂಡಫ್ ನೀಡಿದ್ದು ತಪ್ಪಾ, ಶುರುವಾಯ್ತು ಚರ್ಚೆ

Krishnaveni K
ಭಾನುವಾರ, 8 ಡಿಸೆಂಬರ್ 2024 (08:56 IST)
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನ ಆಸೀಸ್ ಬ್ಯಾಟಿಗ ಟ್ರಾವಿಸ್ ಹೆಡ್ ಮತ್ತು ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ನಡುವಿನ ಆಕ್ರಮಣಕಾರೀ ವರ್ತನೆ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ನಿನ್ನೆಯ  ದಿನದಾಟದಲ್ಲಿ ಟ್ರಾವಿಸ್ ಹೆಡ್ ರನ್ನು ಬೌಲ್ಡ್ ಔಟ್ ಮಾಡಿದ್ದ ಸಿರಾಜ್ ಸೆಂಡ್ ಆಫ್ ನೀಡಿದ್ದರು. ಇದಕ್ಕೆ ಟ್ರಾವಿಸ್ ಕೂಡಾ ನಿಂದಿಸುತ್ತಾ ಪೆವಿಲಿಯನ್ ಗೆ ಹೆಜ್ಜೆ ಹಾಕಿದ್ದಾರೆ. ಸಿರಾಜ್ ಕೂಡಾ ಟ್ರಾವಿಸ್ ರತ್ತ ದಿಟ್ಟಿಸಿ ನೋಡಿ ತಿರುಗೇಟು ಕೊಟ್ಟಿದ್ದಾರೆ. ಇಬ್ಬರ ನಡುವಿನ ವಾಗ್ಯುದ್ಧ ಈಗ ಚರ್ಚೆಗೆ ಕಾರಣವಾಗಿದೆ.

 
ಸಿರಾಜ್ ವರ್ತನೆಗೆ ಕಿಡಿ ಕಾರಿದ್ದ ಸುನಿಲ್ ಗವಾಸ್ಕರ್, 140 ರನ್ ಗಳ ಬೃಹತ್ ಇನಿಂಗ್ಸ್ ಆಡಿದ ವ್ಯಕ್ತಿಗೆ ಈ ರೀತಿ ಸೆಂಡ್ ಆಫ್ ಅಗತ್ಯವೇ ಇರಲಿಲ್ಲ. ಆತ ಕೇವಲ 4 ಅಥವಾ 5 ರನ್ ಗೆ ಔಟಾಗಿದ್ದಲ್ಲ. ನನ್ನ ಕೇಳಿದರೆ ಇದು ಅನಗತ್ಯ ವರ್ತನೆಯಾಗಿತ್ತು ಎಂದು ಅಸಮಾಧಾನ ಹೊರಹಾಕಿದ್ದರು.

ಆದರೆ ನೆಟ್ಟಿಗರು ಸಿರಾಜ್ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದೇ ವರ್ತನೆಯನ್ನು ಆಸ್ಟ್ರೇಲಿಯಾದವರು ತೋರಿದರೆ ಅದನ್ನು ಅಗ್ರೆಷನ್ ಎನ್ನುತ್ತೀರಿ. ಆದರೆ ಭಾರತೀಯರು ಮಾಡಿದರೆ ಅದು ದುರ್ವರ್ತನೆಯಾಗುತ್ತದಾ? ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿಗೆ ಕಿಚ್ಚು ಹಚ್ಚಲು ಇಂತಹ ಕೆಲವು ವಿಚಾರಗಳು ಮೈದಾನದಲ್ಲಿ ನಡೆಯಬೇಕು ಎಂದು ಕೆಲವರು ಸಮರ್ಥಿಸಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ನೋಟ್ ಬುಕ್ ಸೆಲೆಬ್ರೇಷನ್ ತಂದ ಆಪತ್ತು, ದಿಗ್ವೇಶ್ ರಾಠಿ ಅಮಾನತು

IPL 2025 video: ಜುಟ್ಟು ಹಿಡಿದು ಎಳೀತೀನಿ ನಿಂದು.. ದಿಗ್ವೇಶ್ ಮೇಲೆ ಅಭಿಷೇಕ್ ಶರ್ಮಾ ರೋಷ

IPL 2025: ಗೆಲ್ಲಲೇಬೇಕಿದ್ದ ಪಂದ್ಯವನ್ನು ಕೈಚೆಲ್ಲಿ ಪ್ಲೇಆಫ್‌ ರೇಸ್‌ನಿಂದ ಹೊರಬಿದ್ದ ಲಖನೌ ಸೂಪರ್‌ ಜೈಂಟ್ಸ್‌

KL Rahul: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ನಾಯಕನಾಗಬೇಕಾ ಶುಬ್ಮನ್ ಗಿಲ್ ಬೇಕಾ

IPL 2025: ಟೈಟನ್ಸ್‌ ವಿರುದ್ಧ ಡೆಲ್ಲಿಗೆ ಮುಖಭಂಗ: ಗುಜರಾತ್‌, ಆರ್‌ಸಿಬಿ, ಪಂಜಾಬ್‌ ತಂಡಗಳಿಗೆ ಪ್ಲೇಆಫ್‌ ಟಿಕೆಟ್‌

ಮುಂದಿನ ಸುದ್ದಿ
Show comments