Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

IND v/s SA Boxing Day test: ರಬಾಡ ದಾಳಿಗೆ ನಲುಗಿದ ಟೀಂ ಇಂಡಿಯಾ

IND v/s SA Boxing Day test: ರಬಾಡ ದಾಳಿಗೆ ನಲುಗಿದ ಟೀಂ ಇಂಡಿಯಾ
ಸೆಂಚೂರಿಯನ್ , ಮಂಗಳವಾರ, 26 ಡಿಸೆಂಬರ್ 2023 (17:14 IST)
Photo Courtesy: Twitter
ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಕಗಿಸೊ ರಬಾಡ ದಾಳಿಗೆ ನಲುಗಿ ಪ್ರಮುಖ 5 ವಿಕೆಟ್ ಕಳೆದುಕೊಂಡು 119 ರನ್ ಗಳಿಸಿದೆ.

ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ-ಯಶಸ್ವೀ ಜೈಸ್ವಾಲ್ ಜೋಡಿ ಕೇವಲ 13 ರನ್ ಗಳಿಸುವಷ್ಟರಲ್ಲಿ ಬೇರ್ಪಟ್ಟರು. 5 ರನ್ ಗಳಿಸಿ ರೋಹಿತ್ ಔಟಾದರು. ಅವರ ಹಿಂದೆಯೇ 17 ರನ್ ಗಳಿಸಿ ಯಶಸ್ವೀ ಜೈಸ್ವಾಲ್ ವಿಕೆಟ್ ಕೀಪರ್ ಗೆ ಕ್ಯಾಚಿತ್ತು ನಿರ್ಗಮಿಸಿದರು.

ಬಳಿಕ ಶುಬ್ಮನ್ ಗಿಲ್ ಕೂಡಾ ಕೇವಲ 2 ರನ್ ಗಳಿಗೆ ವಿಕೆಟ್ ಒಪ್ಪಿಸಿದಾಗ ಭಾರತ ಸಂಕಷ್ಟಕ್ಕೀಡಾಯಿತು. ಈ ವೇಳೆ  ತಂಡದ ಮೊತ್ತ 24 ರನ್ ಗಳಿಗೆ 3 ವಿಕೆಟ್ ಎಂಬಂತಹ ಪರಿಸ್ಥಿತಿಯಿತ್ತು. ಈ ವೇಳೆ ಜೊತೆಯಾದ ಕೊಹ್ಲಿ-ಶ್ರೇಯಸ್ ಅಯ್ಯರ್ ಜೋಡಿ ಅರ್ಧಶತಕದ ಜೊತೆಯಾಟವಾಡಿ ಚೇತರಿಕೆ ನೀಡಿದರು. ಆದರೆ 31 ರನ್ ಗಳಿಸಿದ್ದ ಶ್ರೇಯಸ್ ಅಯ್ಯರ್ ಮತ್ತೆ ರಬಾಡ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಅವರ ಬೆನ್ನಲ್ಲೇ 38 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಕೂಡಾ ರಬಾಡಗೆ ವಿಕೆಟ್ ಒಪ್ಪಿಸಿದರು.

ಇದೀಗ ಕ್ರೀಸ್ ನಲ್ಲಿ 5 ರನ್ ಗಳಿಸಿರುವ ಕೆಎಲ್ ರಾಹುಲ್ ಮತ್ತು 8 ರನ್ ಗಳಿಸಿರುವ ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆಫ್ರಿಕಾ ಪರ ಈಗಾಗಲೇ ರಬಾಡ 3, ಬರ್ಗರ್ 2 ವಿಕೆಟ್ ಕಬಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

IND v/s SA Boxing Day test: ಟಾಸ್ ಗೆದ್ದ ಆಫ್ರಿಕಾ, ಟೀಂ ಇಂಡಿಯಾ ಪರ ಪ್ರಸಿದ್ಧ ಕೃಷ್ಣ ಡೆಬ್ಯೂಟ್