Publish Date: Thu, 16 Mar 2017 (09:12 IST)
Updated Date: Thu, 16 Mar 2017 (09:14 IST)
ದುಬೈ: ಐಸಿಸಿಯ ಮುಖ್ಯಸ್ಥ ಸ್ಥಾನಕ್ಕೆ ಭಾರತದ ಶಶಾಂಕ್ ಮನೋಹರ್ ದಿಡೀರ್ ರಾಜೀನಾಮೆ ನೀಡಿದ್ದಾರೆ. ಭಾರತೀಯನಾಗಿದ್ದುಕೊಂಡು ಬಿಸಿಸಿಐಗೇ ಸಡ್ಡು ಹೊಡೆಯುವಂತಹ ನಿರ್ಧಾರ ಕೈಗೊಳ್ಳುತ್ತಿದ್ದ ಮನೋಹರ್ ರಾಜೀನಾಮೆ ಅಚ್ಚರಿಯುಂಟು ಮಾಡಿದೆ.
ಐಸಿಸಿಯ ಮೊದಲ ಸ್ವತಂತ್ರ ಅಧ್ಯಕ್ಷನೆಂಬ ಹೆಗ್ಗಳಿಕೆ ಹೊಂದಿದ್ದ ಮನೋಹರ್ ತಮ್ಮ ರಾಜೀನಾಮೆ ಪತ್ರವನ್ನು ಸಿಇಒ ಡೇವ್ ರಿಚರ್ಡ್ ಸನ್ ಗೆ ರವಾನಿಸಿದ್ದಾರೆ. ಹಲವು ವಿಚಾರಗಳಲ್ಲಿ ಬಿಸಿಸಿಐಗೆ ಸಡ್ಡು ಹೊಡೆಯುವಂತಹ ತೀರ್ಮಾನ ಕೈಗೊಂಡು ಭಾರತೀಯ ಕ್ರಿಕೆಟ್ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಿದ್ದರು.
ಸದ್ಯದಲ್ಲೇ ಐಸಿಸಿಯ ಮುಖ್ಯ ಸಭೆ ನಡೆಯಲಿದ್ದು, ಸಂಭಾವ್ಯ ಮುಖಭಂಗ ತಪ್ಪಿಸಲು ಹೀಗೆ ಮಾಡಿರಬಹುದೆಂದು ಅಂದಾಜಿಸಲಾಗಿದೆ. ಸದ್ಯ 9 ತಿಂಗಳ ಅಧಿಕಾರಾವಧಿ ಮುಗಿಸಿರುವ ಶಶಾಂಕ್ ಗೆ ಇನ್ನೂ 15 ತಿಂಗಳ ಕಾಲಾವಧಿ ಇತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ