Select Your Language

Notifications

webdunia
webdunia
webdunia
webdunia

ICC ChampionTrophy 2025: ಹೈವೋಲ್ಟೇಜ್ ಪಂದ್ಯದ ಸ್ಥಳ, ದಿನಾಂಕ, ಸಮಯ ಹೀಗಿದೆ

ICC Champion Trophy 2025, South Africa vs New Zealand,

Sampriya

ಬೆಂಗಳೂರು , ಬುಧವಾರ, 5 ಮಾರ್ಚ್ 2025 (18:17 IST)
Photo Courtesy X
ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ ಸವಾಲಿನ ಮೊತ್ತವನ್ನು ಬೆನ್ನಟ್ಟುವ ಮೂಲಕ ಟೀಂ ಇಂಡಿಯಾ ಚಾಂಪಿಯನ್ ಟ್ರೋಫಿ 2025ರ ತಲುಪಿದೆ. ಈ ಮೂಲಕ ಭಾರತವು ಆಸ್ಟ್ರೇಲಿಯಾವನ್ನು ಸೋಲಿಸಿ, 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು.

ಇಂದು ನ್ಯೂಜಿಲ್ಯಾಂಡ್ ಹಾಗೂ ಸೌತ್‌ ಆಫ್ರಿಕಾ ನಡುವೆ ಎರಡನೇ ಸೆಮಿಫೈನಲ್ ಪಂದ್ಯಾಟ ನಡೆಯುತ್ತಿದ್ದು, ಇದರಲ್ಲಿ ಜಯಶಾಲಿಯಾಗುವ ಟೀ, ಪೈನಲ್‌ನಲ್ಲಿ ಭಾರತವನ್ನು ಎದುರಿಸಲಿದೆ. ಇದೀಗ ರೋಮಾಂಚಕ ಕ್ಷಣಗಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಫೈನಲ್ ಪಂದ್ಯಾಟವು ಇದೇ 9ರಂದು ಐಕಾನಿಕ್ ದುಬೈ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ.

ICC ಚಾಂಪಿಯನ್ಸ್ ಟ್ರೋಫಿ 2025 ಫೈನಲ್: ದಿನಾಂಕ, ಸ್ಥಳ, ಸಮಯ, ಎಲ್ಲಿ ನೋಡಬೇಕೆಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

    ದಿನಾಂಕ: ಅಂತಿಮ ಪಂದ್ಯವನ್ನು ಭಾನುವಾರ, ಮಾರ್ಚ್ 9, 2025 ರಂದು ನಿಗದಿಪಡಿಸಲಾಗಿದೆ.

   ಸ್ಥಳ: ಯುಎಇಯ ದುಬೈ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಫೈನಲ್ ನಡೆಯಲಿದೆ

   ಅಂತಿಮ ತಂಡಗಳು: ಭಾರತ vs ದಕ್ಷಿಣ ಆಫ್ರಿಕಾ/ನ್ಯೂಜಿಲೆಂಡ್

  ಸಮಯ: ಪಂದ್ಯವು ಮಧ್ಯಾಹ್ನ 2:30 ಪ್ರಾರಂಭವಾಗಲಿದೆ.

ಫೈನಲ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಲೈವ್ ಆಗಿ ವೀಕ್ಷಿಸಬಹುದು ಮತ್ತು ಭಾರತದಲ್ಲಿನ JioHotstar ಅಪ್ಲಿಕೇಶನ್‌ನಲ್ಲಿ ಸ್ಟ್ರೀಮ್ ಮಾಡಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಟಾಸ್‌ ಗೆದ್ದ ನ್ಯೂಜಿಲೆಂಡ್‌ ಬ್ಯಾಟಿಂಗ್‌ ಆಯ್ಕೆ: ಚೋಕರ್‌ ಹಣೆಪಟ್ಟಿಯಿಂದ ಹೊರಬರುತ್ತಾ ದಕ್ಷಿಣ ಆಫ್ರಿಕಾ