ದುಬೈ: ಐಸಿಸಿ ಮುಂದಿನ ಐದು ವರ್ಷಗಳ ಕ್ರೀಡಾ ಕೂಟಗಳ ಪಟ್ಟಿ ಬಿಡುಗಡೆ ಮಾಡಿದ್ದು, ಭಾರತದಲ್ಲಿ ನಡೆಯಬೇಕಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯನ್ನು ರದ್ದುಗೊಳಿಸಿದೆ.
ಬಿಸಿಸಿಐ ಮಾಜಿ ಅಧ್ಯಕ್ಷ,ದಿವಂಗತ ಜಗನ್ಮೋಹನ್ ದಾಲ್ಮಿಯಾ ಆರಂಭಿಸಿದ್ದ ಮಿನಿ ವಿಶ್ವಕಪ್ ಎಂದೇ ಕರೆಯಿಸಿಕೊಳ್ಳುವ ಚಾಂಪಿಯನ್ಸ್ ಟ್ರೋಫಿ ಟೂರ್ನಿ 2020 ರಲ್ಲಿ ಭಾರತದಲ್ಲಿ ನಡೆಯಬೇಕಿತ್ತು.
ಆದರೆ ಇದರ ಬಗ್ಗೆ ಐಸಿಸಿ ಮತ್ತು ಬಿಸಿಸಿಐ ನಡುವೆ ತಿಕ್ಕಾಟ ನಡೆಯುತ್ತಲೇ ಇತ್ತು. ಭಾರತ ಸರ್ಕಾರ ಇಂತಹ ಟೂರ್ನಿಗಳಿಗೆ ತೆರಿಗೆ ವಿನಾಯ್ತಿ ನೀಡಲ್ಲವೆಂಬ ಕಾರಣಕ್ಕೆ ಭಾರತದಲ್ಲಿ ಟೂರ್ನಿ ಆಯೋಜಿಸುವುದಕ್ಕೆ ಐಸಿಸಿ ತಕರಾರು ತೆಗೆಯುತ್ತಲೇ ಇತ್ತು.
ಇದೀಗ ತನ್ನ ಪಂಚ ವಾರ್ಷಿಕ ಟೂರ್ನಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಬಗ್ಗೆ ಪ್ರಸ್ತಾಪಿಸದೇ ಅದರ ಬದಲು ಟಿ20 ವಿಶ್ವಕಪ್ ವೇಳಾಪಟ್ಟಿ ನೀಡಿದೆ. ಟಿ20 ಜಮಾನಾದಲ್ಲಿ ಏಕದಿನ ಚಾಂಪಿಯನ್ಸ್ ಟ್ರೋಫಿ ಬಗ್ಗೆ ಜನರು ಆಸಕ್ತಿ ತೋರಲ್ಲವೆಂದು ನೆಪ ಹೇಳಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ರದ್ದುಗೊಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.