ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರು ತಂಡಕ್ಕೆ ಆಯ್ಕೆಯಾಗಬೇಕಾದರೆ ಯೋ ಯೋ ಫಿಟ್ನೆಸ್ ಟೆಸ್ಟ್ ಗೆ ಹಾಜರಾಗಲೇಬೇಕು. ಆದರೆ ರೋಹಿತ್ ಶರ್ಮಾ ತಡವಾಗಿ ಹಾಜರಾದರು.
ಇದರಿಂದಾಗಿ ಇಂಗ್ಲೆಂಡ್ ಸರಣಿಗೆ ಆರಂಭಿಕ ರೋಹಿತ್ ಆಯ್ಕೆಯಾದರೂ, ತಂಡದೊಂದಿಗೆ ಕೂಡಿಕೊಳ್ಳುವುದು ಇನ್ನೂ ತೀರ್ಮಾನವಾಗಿರಲಿಲ್ಲ. ಅಸಲಿಗೆ ಜೂನ್ 17 ರಂದೇ ರೋಹಿತ್ ಫಿಟ್ನೆಸ್ ಟೆಸ್ಟ್ ಗೆ ಹಾಜರಾಗಬೇಕಿತ್ತು. ಆದರೆ ನಿನ್ನೆ ತಡವಾಗಿ ಫಿಟ್ನೆಸ್ ಟೆಸ್ಟ್ ಗೆ ಹಾಜರಾಗಿ ಗೆದ್ದೂ ಬಿಟ್ಟರು.
ಆದರೆ ರೋಹಿತ್ ಹೊರತಾಗಿ ಉಳಿದೆಲ್ಲಾ ಟೀಂ ಇಂಡಿಯಾ ಆಟಗಾರರು ಫಿಟ್ನೆಸ್ ಟೆಸ್ಟ್ ಗೆ ಮೊದಲೇ ಹಾಜರಾಗಿದ್ದರು. ಆದರೆ ರೋಹಿತ್ ಇನ್ನೂ ಹಾಜರಾಗದೇ ಇರುವುದನ್ನು ನೋಡಿ ಅವರು ನಿಜವಾಗಿಯೂ ಫಿಟ್ ಆಗಿದ್ದಾರೆಯೇ ಇಲ್ಲವೇ ಎಂಬ ಅನುಮಾನ ಮೂಡಿಸಿತ್ತು. ಇತ್ತ ರೋಹಿತ್ ಫೇಲಾದರೆ ಅವರ ಸ್ಥಾನದಲ್ಲಿ ಇಂಗ್ಲೆಂಡ್ ಸರಣಿಗೆ ಆರಂಭಿಕರಾಗಿ ಕಣಕ್ಕಿಳಿಯಲು ಅಜಿಂಕ್ಯಾ ರೆಹಾನೆಯನ್ನು ಮೀಸಲು ಆಟಗಾರನಾಗಿ ನಿಗದಿಪಡಿಸಲಾಗಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿದ ಬಿಸಿಸಿಐ ‘ಮೀಸಲು ಆಟಗಾರನನ್ನು ನಿಗದಿಪಡಿಸಿರುವುದರ ಹಿಂದೆ ವಿಶೇಷ ಉದ್ದೇಶವೇನೂ ಇಲ್ಲ. ಸದ್ಯದ ಮಾಹಿತಿ ಪ್ರಕಾರ ರೋಹಿತ್ ಫಿಟ್ನೆಸ್ ನಲ್ಲಿ ಯಾವುದೇ ಕೊರತೆಯಿಲ್ಲ. ಅವರ ಕೆಲವು ಕಮಿಟ್ ನಿಂದಾಗಿ ಫಿಟ್ನೆಸ್ ಟೆಸ್ಟ್ ಗೆ ಹಾಜರಾಗಿರಲಿಲ್ಲ’ ಎಂದು ಹೇಳಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.