Publish Date: Sun, 11 Nov 2018 (09:32 IST)
Updated Date: Sun, 11 Nov 2018 (09:34 IST)
ಗಯಾನಾ: ವೆಸ್ಟ್ ಇಂಡೀಸ್ ನಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್ ಕೂಟದ ಮೊದಲ ಪಂದ್ಯದಲ್ಲೇ ಭರ್ಜರಿ ಶತಕ ಗಳಿಸಿ ಭಾರತ ತಂಡಕ್ಕೆ ಜಯ ದೊರಕಿಸಿಕೊಟ್ಟ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ದೊಡ್ಡ ಸೀಕ್ರೆಟ್ ಬಯಲು ಮಾಡಿದ್ದಾರೆ.
ದಾಖಲೆಯ ಶತಕ ಸಿಡಿಸುವಾಗ ಹರ್ಮನ್ ಪರಿಸ್ಥಿತಿ ಹೇಗಿತ್ತು ಎಂದು ಗೊತ್ತಾದರೆ ಆಕೆಯ ಸಾಧನೆಗೆ ಮತ್ತಷ್ಟು ಹೆಮ್ಮಯಾಗುತ್ತದೆ. ಕೇವಲ 51 ಎಸೆತಗಳಲ್ಲಿ ಶತಕ ಸಿಡಿಸಿದ ಹರ್ಮನ್ ಆ ಸಾಧನೆ ಮಾಡುವಾಗ ಜ್ವರ, ಹೊಟ್ಟೆಯ ಸ್ನಾಯು ಸೆಳೆತದಿಂದ ಬಳಲುತ್ತಿದ್ದರಂತೆ!
ಇನಿಂಗ್ಸ್ ಆರಂಭದಲ್ಲಿ ಸಿಂಗಲ್ಸ್, ಎರಡು ರನ್ ಓಡುವಾಗ ಸ್ನಾಯು ಸೆಳೆತ ಜೋರಾಯಿತು. ಆಗ ಫಿಸಿಯೋ ನನಗೆ ಔಷಧಿ ನೀಡಿದರು. ಬಳಿಕ ಸಿಂಗಲ್ಸ್ ಓಡುವ ಬದಲು ಬೌಂಡರಿ, ಸಿಕ್ಸರ್ ಮೂಲಕ ರನ್ ಗಳಿಸಲು ನಿರ್ಧರಿಸಿದೆ. ನ್ಯೂಜಿಲೆಂಡ್ ನಲ್ಲಿ ಉತ್ತಮ ಚೇಸರ್ ಗಳಿದ್ದಾರೆ ಎಂದು ನನಗೆ ಗೊತ್ತಿತ್ತು. ಹೀಗಾಗಿ ಉತ್ತಮ ಮೊತ್ತ ಗಳಿಸಲೇ ಬೇಕು ಎಂದು ನಿರ್ಧರಿಸಿದ್ದೆ ಎಂದು ಹರ್ಮನ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.