ಮುಂಬೈ: ಕಾಫಿ ವಿತ್ ಕರಣ್ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿದ್ದ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಗೆ ಬಿಸಿಸಿಐ ಅಮಾನತಿನ ಶಿಕ್ಷೆ ನೀಡಿದೆ.
ಈ ಬಗ್ಗೆ ಬಿಸಿಸಿಐ ಆಡಳಿತ ಮಂಡಳಿ ಮೊನ್ನೆಯೇ ಎರಡು ಪಂದ್ಯಗಳಿಗೆ ನಿಷೇಧದ ಶಿಫಾರಸ್ಸು ಮಾಡಿತ್ತು. ಇದೀಗ ಅಧಿಕೃತವಾಗಿ ಇಬ್ಬರೂ ಆಟಗಾರರಿಗೆ ಪ್ರತ್ಯೇಕ್ಯ ನೋಟಿಸ್ ಕಳುಹಿಸಿರುವ ಬಿಸಿಸಿಐ ಮುಂದಿನ ತನಿಖೆಯಾಗುವವರೆಗೂ ಇಬ್ಬರೂ ಆಟಗಾರರು ಪಂದ್ಯ ಅಥವಾ ಐಸಿಸಿ, ಬಿಸಿಸಿಐ, ದೇಶೀಯ, ರಾಜ್ಯ ಕ್ರಿಕೆಟ್ ಸಂಸ್ಥೆ ಸೇರಿದಂತೆ ಯಾವುದೇ ಅಧಿಕೃತ, ಅನಧಿಕೃತ ಸಂಸ್ಥೆಗಳ ಕಾರ್ಯಕ್ರಮಗಳಲ್ಲೂ ಭಾಗವಹಿಸುವಂತಿಲ್ಲ ಎಂದು ಆದೇಶ ಹೊರಡಿಸಿದೆ.
ಈ ಮೂಲಕ ಇಬ್ಬರೂ ಕ್ರಿಕೆಟಿಗರ ಮೇಲೆ ಅಶಿಸ್ತಿನ ನಡುವಳಿಕೆಗೆ ಬಿಸಿಸಿಐ ಕ್ರಮ ಕೈಗೊಂಡಿದೆ. ಹೀಗಾಗಿ ಇಬ್ಬರೂ ಆಟಗಾರರು ಬಿಸಿಸಿಐಯ ಮುಂದಿನ ಆದೇಶದವರೆಗೆ ಆಸ್ಟ್ರೇಲಿಯಾದಲ್ಲಿ ಪಂದ್ಯವಾಡುವಂತಿಲ್ಲ. ರಾಹುಲ್ ಆಡುವ ಬಳಗದಲ್ಲಿ ಅವಕಾಶ ಪಡೆಯುವುದು ಕಡಿಮೆ. ಆದರೆ ಪಾಂಡ್ಯ ಆಲ್ ರೌಂಡರ್ ಆಗಿ ಸ್ಥಾನ ಪಡೆಯುತ್ತಿದ್ದರು. ಆದರೆ ಪಾಂಡ್ಯ ಬದಲಿಗೆ ಇದೀಗ ರವೀಂದ್ರ ಜಡೇಜಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ