Select Your Language

Notifications

webdunia
webdunia
webdunia
webdunia

ಭಾರತೀಯ ಶೈಲಿಯಲ್ಲಿ ಮದುವೆಯಾದ ಆಸೀಸ್ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ ವೆಲ್

ಗ್ಲೆನ್ ಮ್ಯಾಕ್ಸ್ ವೆಲ್
ಚೆನ್ನೈ: ಆಸ್ಟ್ರೇಲಿಯಾ ಕ್ರಿಕೆಟಿಗ, ಆರ್ ಸಿಬಿ ತಂಡದ ಪ್ರಮುಖ ತಾರೆ ಗ್ಲೆನ್ ಮ್ಯಾಕ್ಸ್ ವೆಲ್ ಭಾರತೀಯ ಸಂಪ್ರದಾಯದಂತೆ ವಿನ್ನಿ ರಾಮನ್ ಜೊತೆ ಸಪ್ತಪದಿ ತುಳಿದಿದ್ದಾರೆ.

ಮಾರ್ಚ್ 18 ರಂದು ಆಸ್ಟ್ರೇಲಿಯಾದಲ್ಲಿ ಅಲ್ಲಿನ ಸಂಪ್ರದಾಯದಂತೆ ತಮಿಳುನಾಡು ಮೂಲದ ವಿನ್ನಿ ರಾಮನ್ ಅವರನ್ನು ಮ್ಯಾಕ್ಸಿ ಮದುವೆಯಾಗಿದ್ದರು. ಇದೀಗ ಐಪಿಎಲ್ ನಿಮಿತ್ತ ಭಾರತಕ್ಕೆ ಬಂದಿರುವ ಮ್ಯಾಕ್ಸ್ ವೆಲ್ ಮತ್ತೊಮ್ಮೆ ತಮಿಳು ಸಂಪ್ರದಾಯದಂತೆ ಮದುವೆಯಾಗಿದ್ದಾರೆ.

ಶಾಸ್ತ್ರೋಸ್ತ್ರಕವಾಗಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಮ್ಯಾಕ್ಸ್ ವೆಲ್ ಮತ್ತು ವಿನ್ನಿ ಜೋಡಿ ಹಾರ ಹಿಡಿದು ಸ್ಟೆಪ್ಸ್ ಹಾಕುತ್ತಿರುವ ವಿಡಿಯೋಗಳು ಈಗ ವೈರಲ್ ಆಗಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಸಿಬಿ ನಾಯಕ ಫಾ ಡು ಪ್ಲೆಸಿಸ್ ಇನಿಂಗ್ಸ್ ನೋಡಿ ಹೊಟ್ಟೆ ಉರಿದುಕೊಂಡ ಸಿಎಸ್ ಕೆ ಫ್ಯಾನ್ಸ್!