Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಟೀಂ ಇಂಡಿಯಾ ಸೇರಲಿರುವ ಗೌತಮ್ ಗಂಭೀರ್ ಗೂ ಸಿಗಲಿದೆ ಈ ವಿಶೇಷ ಸವಲತ್ತು

Gautam Gambhir

Krishnaveni K

ಮುಂಬೈ , ಸೋಮವಾರ, 17 ಜೂನ್ 2024 (10:48 IST)
ಮುಂಬೈ: ರಾಹುಲ್ ದ್ರಾವಿಡ್ ಬಳಿಕ ಟೀಂ ಇಂಡಿಯಾ ಕೋಚ್ ಆಗಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಕೋಚ್ ಆಗಲಿರುವ ಗಂಭೀರ್ ಗೂ ಬಿಸಿಸಿಐ ವಿಶೇಷ ಸವಲತ್ತು ನೀಡಲಿದೆ.

ಐಪಿಎಲ್ ನಲ್ಲಿ ಕೆಕೆಆರ್ ತಂಡದ ಯಶಸ್ವೀ ಮೆಂಟರ್ ಎನಿಸಿಕೊಂಡಿದ್ದ ಗೌತಮ್ ಗಂಭೀರ್ ರನ್ನು ದ್ರಾವಿಡ್ ಬಳಿಕ ಟೀಂ ಇಂಡಿಯಾ ಕೋಚ್ ಆಗಿ ನೇಮಿಸಲು ಬಿಸಿಸಿಐ ಎಲ್ಲಾ ತಯಾರಿ ನಡೆಸಿದೆ. ಈಗಾಗಲೇ ಗಂಭೀರ್ ಜೊತೆ ಮಾತುಕತೆ ನಡೆಸಿ ಒಪ್ಪಂದಕ್ಕೂ ಬರಲಾಗಿದೆ ಎಂಬ ಮಾಹಿತಿಯಿದೆ. ಅದಕ್ಕೆ ತಕ್ಕಂತೆ ಇತ್ತೀಚೆಗೆ ಗಂಭೀರ್ ಸಂದರ್ಶನವೊಂದರಲ್ಲಿ ತಮಗೆ ಟೀಂ ಇಂಡಿಯಾ ಕೋಚ್ ಆಗುವ ಆಸಕ್ತಿಯಿದೆ ಎಂದಿದ್ದರು.

ಹೀಗಾಗಿ ದ್ರಾವಿಡ್ ಅವಧಿ ಈ ತಿಂಗಳ ಅಂತ್ಯಕ್ಕೆ ಮುಕ್ತಾಯವಾಗುತ್ತಿದ್ದಂತೇ ಗಂಭೀರ್ ಹೆಸರು ಘೋಷಣೆಯಾಗಲಿದೆ. ಸಾಮಾನ್ಯವಾಗಿ ಟೀಂ ಇಂಡಿಯಾ ಕೋಚ್ ಆಗುವವರು ತಮ್ಮ ಸಹಾಯಕ ಸಿಬ್ಬಂದಿಗಳನ್ನು ತಾವೇ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಮೊದಲು ರವಿಶಾಸ್ತ್ರಿ, ರಾಹುಲ್ ದ್ರಾವಿಡ್ ಎಲ್ಲರೂ ತಮ್ಮ ಸಹಾಯಕ ಸಿಬ್ಬಂದಿಗಳನ್ನು ತಾವೇ ಆಯ್ಕೆ ಮಾಡಿಕೊಳ್ಳುತ್ತಿದ್ದರು.

ಇದೀಗ ಗಂಭೀರ್ ಗೂ ಆ ಸವಲತ್ತು ಸಿಗಲಿದೆ. ತಮ್ಮ ಬೌಲಿಂಗ್, ಫೀಲ್ಡಿಂಗ್, ಬ್ಯಾಟಿಂಗ್ ಕೋಚ್ ಸೇರಿದಂತೆ ತಮ್ಮ ಸಹಾಯಕ ಸಿಬ್ಬಂದಿಗಳನ್ನು ಗಂಭೀರ್ ತಾವೇ ಆಯ್ಕೆ ಮಾಡಲಿದ್ದಾರೆ. 2027 ರ ಏಕದಿನ ವಿಶ್ವಕಪ್ ವರೆಗೆ ಗಂಭೀರ್ ಮುಖ್ಯ ಕೋಚ್ ಆಗಿ ಆಯ್ಕೆಯಾಗುವ ಸಾಧ್ಯತೆಯಿದೆ. ಸದ್ಯಕ್ಕೆ ಬ್ಯಾಟಿಂಗ್ ಕೋಚ್ ಆಗಿ ವಿಕ್ರಮ್ ರಾಥೋಡ್ ಇದ್ದಾರೆ. ರವಿಶಾಸ್ತ್ರಿ ಅವಧಿಯಿಂದಲೂ ಅವರೇ ಬ್ಯಾಟಿಂಗ್ ಕೋಚ್ ಆಗಿದ್ದರು. ಆದರೆ ದ್ರಾವಿಡ್ ತಮ್ಮ ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್ ಗಳನ್ನು ತಾವೇ ಆಯ್ಕೆ ಮಾಡಿಕೊಂಡಿದ್ದರು. ಇದೀಗ ಗಂಭೀರ್ ಈ ಎಲ್ಲಾ ಕೋಚ್ ಗಳನ್ನೂ ಬದಲಾಯಿಸುತ್ತಾರೋ ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

T20 World Cup 2024: ಶ್ರೀಲಂಕಾಗೆ ನೆದರ್ಲ್ಯಾಂಡ್ಸ್ ವಿರುದ್ಧ ಭರ್ಜರಿ ಗೆಲುವು, ಅದರೂ ನೋ ಯೂಸ್