Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಾರತ-ಪಾಕಿಸ್ತಾನ ನಡುವಿನ ಆ ಐದು ಸ್ಮರಣೀಯ ಪಂದ್ಯಗಳು

ಭಾರತ-ಪಾಕಿಸ್ತಾನ ನಡುವಿನ ಆ ಐದು ಸ್ಮರಣೀಯ ಪಂದ್ಯಗಳು
London , ಭಾನುವಾರ, 4 ಜೂನ್ 2017 (08:57 IST)
ಲಂಡನ್: ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಪಂದ್ಯಗಳಷ್ಟೂ ಕ್ರಿಕೆಟ್ ಅಭಿಮಾನಿಗಳಿಗೆ ರೋಚಕ, ಸ್ಮರಣೀಯ ನೆನಪುಗಳನ್ನು ಕೊಟ್ಟಿದೆ. ಇವುಗಳ ಪೈಕಿ ಐದು ಪಂದ್ಯಗಳನ್ನು ನೆನಪು ಮಾಡಿಕೊಳ್ಳೋಣ.

 
ಶಾರ್ಜಾ ಕಪ್ ಫೈನಲ್
1986 ರ ಶಾರ್ಜಾ ಕಪ್ ಫೈನಲ್ ಪಂದ್ಯವನ್ನು ಇಂದಿಗೂ ಜನ ಸ್ಮರಿಸಿಕೊಳ್ಳುತ್ತಾರೆ. ಆ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಕಪ್ ಗೆಲ್ಲಲು ಕೊನೆಯ ಬಾಲ್ ನಲ್ಲಿ 4 ರನ್ ಬೇಕಾಗಿತ್ತು. ಚೇತನ್ ಶರ್ಮಾ ಕೈಯಲ್ಲಿ ಬಾಲ್ ಇತ್ತು. ಜಾವೆದ್ ಮಿಯಾಂದಾದ್ ಬ್ಯಾಟಿಂಗ್ ಮಾಡುತ್ತಿದ್ದರು. ಚೇತನ್ ಶರ್ಮಾ ದುರದೃಷ್ಟವೋ ಏನೋ ಮಿಯಾಂದಾದ್ ಆ ಬಾಲ್ ನ್ನು ಸಿಕ್ಸರ್ ಎತ್ತಿದರು. ಪಾಕ್ 1 ವಿಕೆಟ್ ನಿಂದ ಗೆದ್ದಿತ್ತು.

2003 ರ ವಿಶ್ವಕಪ್
2003 ರ ವಿಶ್ವಕಪ್ ನ ಲೀಗ್ ಹಂತದಲ್ಲಿ ಪಾಕ್ ಎದುರು ಭಾರತ ಸೆಣಸಿತ್ತು. ಅಷ್ಟರವರೆಗೆ ಮಂಕಾಗಿದ್ದ ಭಾರತ ಈ ಪಂದ್ಯದಲ್ಲಿ 6 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸುವುದರೊಂದಿಗೆ ಹಳಿಗೆ ಬಂದಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಸಚಿನ್ ತೆಂಡುಲ್ಕರ್ ಶೊಯೇಬ್ ಅಖ್ತರ್ ಬೌಲಿಂಗ್ ನಲ್ಲಿ ಪಾಯಿಂಟ್ ಕ್ಷೇತ್ರಕ್ಕೆ ಹೊಡೆದ ಸಿಕ್ಸರ್ ನನ್ನು ಅಭಿಮಾನಿಗಳು ಇಂದಿಗೂ ಸ್ಮರಿಸಿಕೊಳ್ಳುತ್ತಾರೆ. ಆ ಪಂದ್ಯದಲ್ಲಿ ಸಚಿನ್ 75 ಬಾಲ್ ಗಳಲ್ಲಿ 98 ರನ್ ಹೊಡೆದಿದ್ದರು.

2004 ರ ಚಾಂಪಿಯನ್ಸ್ ಟ್ರೋಫಿ
2004 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಇದೇ ಎಡ್ಜ್ ಬಾಸ್ಟನ್ ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯವನ್ನು ಪಾಕಿಸ್ತಾನ ಮೂರು ವಿಕೆಟ್ ಗಳಿಂದ ಗೆದ್ದಿತ್ತು. ಈ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ಟೆನಿಸ್ ಎಲ್ಬೋ ಸಮಸ್ಯೆಯಿಂದಾಗಿ ಆಡಿರಲಿಲ್ಲ. ರಾಣಾ ನವೇದ್ ಮತ್ತು ಅಖ್ತರ್ ತಲಾ ನಾಲ್ಕು ವಿಕೆಟ್ ಕಿತ್ತು ಭಾರತವನ್ನು ಕಂಗೆಡಿಸಿದ್ದರು.

2011 ರ ವಿಶ್ವಕಪ್ ಪಂದ್ಯ

ಭಾರತದಲ್ಲಿ ನಡೆದ ಟೀಂ ಇಂಡಿಯಾ ವಿಶ್ವಚಾಂಪಿಯನ್ ಆಗಿ ಮೆರೆದ ವಿಶ್ವಕಪ್ ಕೂಟದ ನಾಕೌಟ್ ಹಂತದಲ್ಲಿ ಉಭಯ ತಂಡಗಳು ಸೆಣಸಿದ್ದವು. ಈ ಪಂದ್ಯವನ್ನು ಭಾರತ 29 ರನ್ ಗಳಿಂದ ಗೆದ್ದಿತ್ತು. ವಿಶೇಷವೆಂದರೆ ಸಚಿನ್ ತೆಂಡುಲ್ಕರ್ ನಾಲ್ಕು ಜೀವದಾನ ಪಡೆದು 85 ರನ್ ಗಳಿಸಿದ್ದರು.

2014 ರ ಏಷ್ಯಾ ಕಪ್
ಬಹುಶಃ ಧೋನಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ಪಂದ್ಯಗಳಲ್ಲಿ ಈ ಪಂದ್ಯವೂ ಒಂದು. ಢಾಕಾದಲ್ಲಿ ನಡೆದ ಈ ಪಂದ್ಯವನ್ನು ಪಾಕ್ 1 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು. ಕೊನೆಯ ಎರಡು ಬಾಲ್ ಗಳಲ್ಲಿ ಸತತ ಸಿಕ್ಸರ್ ಎತ್ತಿ ಶಾಹಿದ್ ಅಫ್ರಿದಿ ಪಾಕ್ ಗೆಲುವಿನ ರೂವಾರಿಯಾದರು.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಅಭಿಮಾನಿಗಳೇ ನಿರ್ಣಾಯಕರು!