ನಾಗ್ಪುರ: ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಫೀಲ್ಡಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಕೊಹ್ಲಿಗೆ ಅದೃಷ್ಟ ಕೈ ಕೊಟ್ಟಿದೆ.
ಮೊದಲ ದಿನವಾದ ನಿನ್ನೆ ಸ್ಲಿಪ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕೊಹ್ಲಿ ಕ್ಯಾಚ್ ಬಿಟ್ಟ ಕಾರಣಕ್ಕೆ ನೆಟ್ಟಿಗರು, ಮಾಜಿ ಕ್ರಿಕೆಟಿಗರಿಂದ ಟೀಕೆಗೊಳಗಾಗಿದ್ದರು. ಸ್ಲಿಪ್ ಫೀಲ್ಡರ್ ಆಗಿ ಅವರು ಪ್ರತೀ ಬಾಲ್ ನ ಮೇಲೂ ಕಣ‍್ಣು ನೆಟ್ಟಿರಬೇಕು ಎಂದು ಮಾಜಿ ಕ್ರಿಕೆಟಿಗ ಮಾರ್ಕ್ ವಾ ಟೀಕಿಸಿದ್ದರು.
ಇಂದು ಬ್ಯಾಟಿಂಗ್ ನಲ್ಲೂ ಕೊಹ್ಲಿ ಮ್ಯಾಜಿಕ್ ನಡೆಯಲಿಲ್ಲ. ಎರಡನೆಯ ದಿನವಾದ ಇಂದು ತಂಡಕ್ಕೆ ಮಹತ್ವದ ಮುನ್ನಡೆ ಕೊಡಿಸುವಲ್ಲಿ ಅವರು ಪ್ರಧಾನ ಪಾತ್ರ ವಹಿಸಬಹುದಿತ್ತು. ರೋಹಿತ್ ಶರ್ಮಾ ಜೊತೆ ನಿಂತು ಆಡುವ ತಾಳ್ಮೆ ತೋರಬೇಕಿತ್ತು. ಆದರೆ ಕೇವಲ 12 ರನ್ ಗಳಿಗೆ ಹೊಸಬ ಟಾಡ್ ಮುರ್ಫಿ ಬೌಲಿಂಗ್ ನಲ್ಲಿ ಸುಲಭವಾಗಿ ಕ್ಯಾಚ್ ನೀಡಿ ಔಟಾದರು. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.