Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಮಧ್ಯಪ್ರದೇಶ ಮತ್ತು ಮುಂಬೈ ನಡುವಿನ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ಗೆಲುವು ಸಾಧಿಸುತ್ತಿದ್ದಂತೇ ಚಿನ್ನಸ್ವಾಮಿ ಮೈದಾನದಲ್ಲಿ ಆರ್ ಸಿಬಿ ಪರ ಜೈಕಾರ ಕೇಳಿಬಂದಿತು.
ಆರ್ ಸಿಬಿ ಪರ ಐಪಿಎಲ್ ಆಡುವ ರಜತ್ ಪಟಿದಾರ್ ಮಧ್ಯಪ್ರದೇಶ ಪರ ಗೆಲುವಿನ ರನ್ ಗಳಿಸಿದರು. ಹೀಗಾಗಿ ಇಲ್ಲಿ ನೆರೆದಿದ್ದ ಪ್ರೇಕ್ಷಕರು ಆರ್ ಸಿಬಿ ಪರ ಜೈಕಾರ ಹಾಕಿದರು.
ರಜತ್ ಪಟಿದಾರ್ ಈ ಪಂದ್ಯದಲ್ಲಿ ಅಜೇಯ 30 ರನ್ ಗಳಿಸಿದರು. ಆರ್ ಸಿಬಿ ತಂಡವನ್ನು ನಾಕೌಟ್ ಹಂತಕ್ಕೇರಿಸಲು ಶತಕ ಗಳಿಸಿ ಸಹಾಯ ಮಾಡಿದ್ದ ರಜತ್ ಗೆ ಈಗ ಬೆಂಗಳೂರು ಮತ್ತೊಂದು ತವರಿನಂತಾಗಿದೆ.