Publish Date: Sat, 12 Mar 2022 (17:07 IST)
Updated Date: Sat, 12 Mar 2022 (17:09 IST)
ಬೆಂಗಳೂರು: ಐಪಿಎಲ್ 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆಗೆ ಇಂದು ಉತ್ತರ ಸಿಕ್ಕಿದೆ. ಇದೀಗ ಆರ್ ಸಿಬಿ ಹೊಸ ನಾಯಕನ ಘೋಷಣೆ ಮಾಡಿದೆ.
ದ.ಆಫ್ರಿಕಾ ಮೂಲದ ಕ್ರಿಕೆಟಿಗ ಫಾ ಡು ಪ್ಲೆಸಿಸ್ ಆರ್ ಸಿಬಿ ನೂತನ ನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ವಿಚಾರವನ್ನು ಆರ್ ಸಿಬಿ ತನ್ನ ಅಧಿಕೃತ ಟ್ವಿಟರ್ ಪೇಜ್ ಮುಖಾಂತರ ಪ್ರಕಟಿಸಿದೆ.
ಕಳೆದ ವರ್ಷದವರೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದ ಫಾ ಡು ಪ್ಲೆಸಿಸ್ ಈ ವರ್ಷವಷ್ಟೇ ಬೆಂಗಳೂರು ತಂಡಕ್ಕೆ ಸೇರ್ಪಡೆಯಾಗಿದ್ದರು. 32 ವರ್ಷದ ಪ್ಲೆಸಿಸ್ ಗೆ ದ.ಆಫ್ರಿಕಾ ತಂಡದ ನಾಯಕರಾಗಿ ಅಪಾರ ಅನುಭವವಿದೆ. ಇದೇ ಕಾರಣಕ್ಕೆ ಗ್ಲೆನ್ ಮ್ಯಾಕ್ಸ್ ವೆಲ್ ರನ್ನೂ ಹಿಂದಿಕ್ಕಿ ಆರ್ ಸಿಬಿ ನಾಯಕರಾಗಿದ್ದಾರೆ.