Publish Date: Mon, 09 Sep 2019 (09:50 IST)
Updated Date: Mon, 09 Sep 2019 (09:52 IST)
ಮುಂಬೈ: ಕೆರೆಬಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಲೀಗ್ ಪಂದ್ಯದ ವೇಳೆ ಟ್ರಿನ್ ಬಾಗೋ ನೈಟ್ ರೈಡರ್ಸ್ ತಂಡದ ಡ್ರೆಸ್ಸಿಂಗ್ ರೂಂನಲ್ಲಿ ಕಾಣಿಸಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಬಿಸಿಸಿಐ ಮುಂದೆ ಕ್ಷಮೆಯಾಚಿಸಿದ್ದಾರೆ.
ಬಾಲಿವುಡ್ ನಟ ಶಾರುಖ‍್ ಖಾನ್ ಒಡೆತನದ ನೈಟ್ ರೈಡರ್ಸ್ ತಂಡದ ಡ್ರೆಸ್ಸಿಂಗ್ ರೂಂನಲ್ಲಿ ಕಾಣಿಸಿಕೊಂಡ ಫೋಟೋಗಳು ಬಿಸಿಸಿಐಗೆ ಸಿಕ್ಕಿತ್ತು. ಒಪ್ಪಿಗೆಯಿಲ್ಲದೇ ವಿದೇಶೀ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಕಾಣಿಸಿಕೊಂಡಿದ್ದಕ್ಕೆ ದಿನೇಶ್ ಕಾರ್ತಿಕ್ ವಿರುದ್ಧ ಬಿಸಿಸಿಐ ವಿವರಣೆ ಕೇಳಿತ್ತು.
ಇದಕ್ಕೆ ಉತ್ತರಿಸಿರುವ ದಿನೇಶ್ ಕಾರ್ತಿಕ್ ‘ಬಿಸಿಸಿಐ ಅನುಮತಿ ಪಡೆಯದೇ ಹೋಗಿರುವುದಕ್ಕೆ ಬೇಷರತ್ ಕ್ಷಮೆಯಾಚಿಸುತ್ತೇನೆ. ಟ್ರಿನ್ ಬಾಗೋ ತಂಡದ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ. ಈ ತಂಡದ ಜತೆಗೆ ನನಗೆ ಯಾವುದೇ ಸಂಬಂಧವಿಲ್ಲ. ಡ್ರೆಸ್ಸಿಂಗ್ ರೂಂನಲ್ಲಿ ಇದ್ದಿದ್ದು ನಿಜ. ಆದರೆ ಮುಂದಿನ ಪಂದ್ಯಗಳಿಗಾಗಿ ಕಾದು ಕುಳಿತಿರಲಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.