Publish Date: Sun, 28 May 2023 (08:28 IST)
Updated Date: Sun, 28 May 2023 (08:29 IST)
ಅಹಮ್ಮದಾಬಾದ್: ಐಪಿಎಲ್ 2023 ರ ಫೈನಲ್ ಪಂದ್ಯ ಇಂದು ಅಹಮ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಮತ್ತು ಚೆನ್ನೈ ನಡುವೆ ನಡೆಯಲಿದೆ.
ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಹೊಸ ದಾಖಲೆಯೊಂದನ್ನು ಬರೆಯಲಿದ್ದಾರೆ. ಧೋನಿಗೆ ಇದು 250 ನೇ ಐಪಿಎಲ್ ಪಂದ್ಯವಾಗಿದ್ದು ಈ ಮೂಲಕ ಐಪಿಎಲ್ ನಲ್ಲಿ ಗರಿಷ್ಠ ಪಂದ್ಯವಾಡಿದ ಆಟಗಾರ ಎಂಬ ದಾಖಲೆ ಮಾಡಲಿದ್ದಾರೆ. 243 ಪಂದ್ಯವಾಡಿರುವ ರೋಹಿತ್ ಶರ್ಮಾ ದ್ವಿತೀಯ ಸ್ಥಾನದಲ್ಲಿದ್ದಾರೆ.
2008 ರಲ್ಲಿ ಚೆನ್ನೈ ತಂಡವನ್ನು ನಾಯಕರಾಗಿ ಮುನ್ನಡೆಸಲು ಪ್ರಾರಂಭಿಸಿದ ಧೋನಿ ಇದುವರೆಗೆ ಚೆನ್ನೈ ಮತ್ತು ಎರಡು ವರ್ಷ ಪುಣೆ ತಂಡದ ನಾಯಕರಾಗಿಯೇ ತಂಡವನ್ನು ಮುನ್ನಡೆಸಿದ್ದಾರೆ.