Publish Date: Fri, 27 Jan 2023 (09:53 IST)
Updated Date: Fri, 27 Jan 2023 (09:55 IST)
ರಾಂಚಿ: ನ್ಯೂಜಿಲೆಂಡ್ ತಂಡದ ಜೊತೆ ಇಂದು ರಾಂಚಿಯಲ್ಲಿ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ನಡೆಯಲಿದೆ.ಈ ಪಂದ್ಯಕ್ಕಾಗಿ ಟೀಂ ಇಂಡಿಯಾ ಈಗಾಗಲೇ ರಾಂಚಿಗೆ ಬಂದಿಳಿದಿದೆ.
ರಾಂಚಿ ಹೇಳಿ ಕೇಳಿ ಮಾಜಿ ನಾಯಕ ಧೋನಿ ತವರೂರು. ಧೋನಿ ಈಗಾಗಲೇ ಐಪಿಎಲ್ ತಯಾರಿಗಾಗಿ ಇಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಈ ನಡುವೆ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದ ಟೀಂ ಇಂಡಿಯಾ ಕ್ರಿಕೆಟಿಗರನ್ನು ಧೋನಿ ಭೇಟಿ ಮಾಡಿದ್ದು, ಸಲಹೆ ಸೂಚನೆ ನೀಡಿದ್ದಾರೆ. ಆ ಕ್ಷಣಗಳನ್ನು ಬಿಸಿಸಿಐ ಶೇರ್ ಮಾಡಿದೆ.
ಯುವ ಕ್ರಿಕೆಟಿಗರಾದ ಇಶಾನ್ ಕಿಶನ್, ಪೃಥ್ವಿ ಶಾ, ವಾಷಿಂಗ್ಟನ್ ಸುಂದರ್ ಗೆ ಧೋನಿ ವಿಶೇಷವಾಗಿ ಸಲಹೆ ನೀಡಿದ್ದಾರೆ. ಇನ್ನು, ಕೋಚ್ ದ್ರಾವಿಡ್ ಜೊತೆಯೂ ಮಾತುಕತೆ ನಡೆಸಿದ್ದಾರೆ.