ರಾಜ್ ಕೋಟ್ : ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಚೇತೇಶ್ವರ ಪೂಜಾರ ಇದುವರೆಗೆ ಯಾರೂ ಮಾಡದ ಕೆಲಸವೊಂದನ್ನು ಮಾಡಿದ್ದಾರೆ!
ಅದೇನು ಗೊತ್ತಾ? ಆರಂಭಿಕ ಪೃಥ್ವಿ ಶಾ ಜತೆಗೆ ದಾಖಲೆಯ ಜತೆಯಾಟವಾಡಿದ ಪೂಜಾರ 88 ರನ್ ಗಳಿಸಿದ್ದರು. ಇದಕ್ಕೆ ಅವರು 200 ಕ್ಕೂ ಹೆಚ್ಚು ಬಾಲ್ ತೆಗೆದುಕೊಂಡಿದ್ದರು.
ಹೇಳಿ ಕೇಳಿ ರಾಜ್ ಕೋಟ್ ನಲ್ಲಿ ಉರಿಬಿಸಿಲು. ಈ ಸಂದರ್ಭದಲ್ಲಿ ದೊಡ್ಡ ಇನಿಂಗ್ಸ್ ಆಡಬೇಕಾದರೆ ದೇಹ ನಿರ್ಜಲೀಕರಣಕ್ಕೊಳಗಾಗದಂತೆ ನೋಡಿಕೊಳ್ಳುವುದು ಮುಖ್ಯ. ಅದಕ್ಕೇ ಪೂಜಾರ ಪ್ಯಾಂಟ್ ಜೇಬಿನೊಳಗೆ ಚಿಕ್ಕದೊಂದು ವಾಟರ್ ಬಾಟಲ್ ಇಟ್ಟುಕೊಂಡು ಆಡಿದ್ದರು! ಇಂತಹ ಕೆಲಸ ಇದುವರೆಗೆ ಯಾರೂ ಮಾಡಿರಲಿಲ್ಲ. ಆದರೆ ಪೂಜಾರ ಮಾತ್ರ ದೊಡ್ಡ ಇನಿಂಗ್ಸ್ ಆಡಲು ಚೆನ್ನಾಗಿಯೇ ಪ್ರಿಪೇರ್ ಆಗಿ ಬಂದಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.