Webdunia - Bharat's app for daily news and videos

Install App

Champions Trophy: ಪಾಕಿಸ್ತಾನವನ್ನು ಸದೆಬಡಿದ ಟೀಂ ಇಂಡಿಯಾಗೆ ಇನ್ನು ಒಂದು ವಾರ ರೆಸ್ಟ್

Krishnaveni K
ಸೋಮವಾರ, 24 ಫೆಬ್ರವರಿ 2025 (14:05 IST)
ದುಬೈ: ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಪಾಕಿಸ್ತಾನ ತಂಡವನ್ನು ಸದೆಬಡಿದು ಸೆಮಿಫೈನಲ್ ಗೆ ಲಗ್ಗೆಯಿಟ್ಟಿರುವ ಟೀಂ ಇಂಡಿಯಾಗೆ ಇನ್ನು ಒಂದು ವಾರ ರೆಸ್ಟ್.

ಚಾಂಪಿಯನ್ಸ್ ಟ್ರೋಫಿಯಲ್ಲಿ ಎರಡು ಲೀಗ್ ಪಂದ್ಯಗಳನ್ನು ಆಡಿರುವ ಟೀಂ ಇಂಡಿಯಾ ಎರಡರಲ್ಲೂ ಗೆಲುವು ಸಾಧಿಸಿದ್ದು ಈಗ ಕೊನೆಯ ಒಂದು ಲೀಗ್ ಪಂದ್ಯವನ್ನು ಆಡಬೇಕಿದೆ. ನ್ಯೂಜಿಲೆಂಡ್ ವಿರುದ್ಧ ಕೊನೆಯ ಲೀಗ್ ಪಂದ್ಯ ಬಾಕಿಯಿದೆ.

ಇದು ಮಾರ್ಚ್ 2 ರಂದು ನಡೆಯಲಿರುವ ಪಂದ್ಯವಾಗಿದೆ. ಅಂದರೆ ಟೀಂ ಇಂಡಿಯಾಗೆ ಬರೋಬ್ಬರಿ ಒಂದು ಕಾಲ ವಿಶ್ರಾಂತಿ ಸಿಕ್ಕಂತಾಗುತ್ತದೆ. ಕ್ರಿಕೆಟ್ ಪ್ರೇಮಿಗಳಿಗೆ ಇದರಿಂದ ನಿರಾಸೆಯಾಗಬಹುದು. ಆದರೆ ಟೀಂ ಇಂಡಿಯಾದಲ್ಲಿ ಈಗಾಗಲೇ ಮೊಹಮ್ಮದ್ ಶಮಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಗಾಯದ ಅಂಚಿನಲ್ಲಿದ್ದಾರೆ. ಇವರೆಲ್ಲರಿಗೂ ಈ ಬ್ರೇಕ್ ನಿಂದ ಲಾಭವಾಗಲಿದೆ.

ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ಸೋತರೂ ಸೆಮಿಫೈನಲ್ ಗೆ ಹೋಗಲಿದೆ. ಯಾಕೆಂದರೆ ಈಗಾಗಲೇ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ.  ಮಾರ್ಚ್ 4 ಕ್ಕೆ ಸೆಮಿಫೈನಲ್ ನಡೆಯಲಿದ್ದು, ಅದಾದ ಬಳಿಕ ಮಾರ್ಚ್ 9 ಕ್ಕೆ ಫೈನಲ್ ಪಂದ್ಯ ನಡೆಯುವುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ನೀರಜ್‌ ಚೋಪ್ರಾ ಹೊಸ ಮೈಲಿಗಲ್ಲು: ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಅಭಿನಂದನೆಗಳ ಮಹಾಪೂರ

Rohit Sharma: ಆ ಸ್ಟ್ಯಾಂಡ್ ಗೇ ಸಿಕ್ಸರ್ ಹೊಡಿ ಎಂದ ರವಿಶಾಸ್ತ್ರಿ: ರೋಹಿತ್ ಶರ್ಮಾ ಉತ್ತರ ವಿಡಿಯೋ ನೋಡಿ

Rohit Sharma video: ಎಲ್ಲರ ಎದುರೇ ಸಹೋದರನಿಗೆ ಬೈದ ರೋಹಿತ್ ಶರ್ಮಾ

Rohit Sharma Video: ಗುದ್ಬಿಡ್ತೀನಿ ನೋಡು: ಅಭಿಮಾನಿ ಜೊತೆ ರೋಹಿತ್ ಶರ್ಮಾ ಕೀಟಲೆ

RCB vs KKR match: ಚಿನ್ನಸ್ವಾಮಿಯಲ್ಲಿಂದು ಪಂದ್ಯ ನಡೆಯವುದೇ ಅನುಮಾನ

ಮುಂದಿನ ಸುದ್ದಿ
Show comments