Webdunia - Bharat's app for daily news and videos

Install App

ಟೀಂ ಇಂಡಿಯಾಕ್ಕೆ ಟರ್ನಿಂಗ್ ಪಾಯಿಂಟ್ ಕೊಟ್ಟ ಭುವನೇಶ್ವರ್ ಕುಮಾರ್ ಆ ಓವರ್ ನಲ್ಲಿ ಮಾಡಿದ್ದೇನು ಗೊತ್ತಾ?

Webdunia
ಸೋಮವಾರ, 19 ಫೆಬ್ರವರಿ 2018 (09:16 IST)
ವಾಂಡರರ್ಸ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಟಿ20 ಸರಣಿಯ ಮೊದಲ ಪಂದ್ಯವೇ ಟೀಂ ಇಂಡಿಯಾ ಪಾಲಾಗಿದೆ. ಆಫ್ರಿಕಾ ವಿರುದ್ಧ ಟೀಂ ಇಂಡಿಯಾ 28 ರನ್ ಗಳ ಗೆಲುವು ಸಾಧಿಸಿದೆ.
 

ಆದರೆ ಈ ಪಂದ್ಯದಲ್ಲಿ ಭಾರತ ನೀಡಿದ 203 ರನ್ ಗಳ ಬೃಹತ್ ಮೊತ್ತವನ್ನು ಆಫ್ರಿಕಾ ಯಶಸ್ವಿಯಾಗಿ ಬೆನ್ನಟ್ಟುವ ಭೀತಿ ಭಾರತಕ್ಕೆ ಎದುರಾಗಿತ್ತು. ಆದರೆ 18 ನೇ ಓವರ್ ಎಸೆದ ಭುವಿ ಪಂದ್ಯವನ್ನು ಸಂಪೂರ್ಣವಾಗಿ ಭಾರತದ ಪಾಲಾಗಿಸಿದರು.

ಈ ಓವರ್ ನಲ್ಲಿ ಒಟ್ಟು ಮೂರು ಎಸೆತಗಳಲ್ಲಿ ಮೂರು ವಿಕೆಟ್ ಬಿದ್ದವು. ಅದರಲ್ಲಿ ಎರಡು ಭುವಿ ಪಾಲಾದರೆ ಇನ್ನೊಂದು ರನೌಟ್. ಹಾಗಾಗಿ ಭಾರತ ನೀಡಿದ ಆಘಾತಕ್ಕೆ ಆಫ್ರಿಕಾ ಮಕಾಡೆ ಮಲಗಿತು. ಭುವನೇಶ್ವರ್ ಕುಮಾರ್ ಹೆನ್ರಿಚ್ ಕ್ಲಾಸೆನ್ ಮತ್ತು ಕ್ರಿಸ್ ಮೋರಿಸ್ ವಿಕೆಟ್ ನ್ನು ಆ ಓವರ್ ನ 4 ಮತ್ತು ಐದನೇ ಎಸೆತಕ್ಕೆ ಎಗರಿಸಿದರು. ಹೀಗಾಗಿ ಅಂತಿಮ ಎಸೆತದಲ್ಲಿ ಅವರಿಗೆ ಹ್ಯಾಟ್ರಿಕ್ ಛಾನ್ಸ್ ಒದಗಿತ್ತು.

ಈ ವೇಳೆ ಕ್ರೀಸ್ ಗೆ ಬಂದ ಪ್ಯಾಟರ್ಸನ್ ಭುವಿ ಕೈಗೆ  ವಿಕೆಟ್ ಒಪ್ಪಿಸಲಿಲ್ಲ. ಹಾಗಿದ್ದರೂ ಹಾರ್ದಿಕ್ ಪಾಂಡ್ಯ ಮತ್ತು ಧೋನಿ ಚುರುಕಿನ ಫೀಲ್ಡಿಂಗ್ ತಪ್ಪಿಸಲಾಗದೆ ರನೌಟ್ ಆದರು. ಇದರೊಂದಿಗೆ ಟೀಂ ಹ್ಯಾಟ್ರಿಕ್ ಆಯ್ತು. ಭುವನೇಶ್ವರ್ ಗೆ ಹ್ಯಾಟ್ರಿಕ್ ಕೈ ತಪ್ಪಿದರೂ 5 ವಿಕೆಟ್ ಕಬಳಿಸಲು ಯಶಸ್ವಿಯಾದರು. ಕೊನೆಗೆ ಆಫ್ರಿಕಾ 9 ವಿಕೆಟ್ ನಷ್ಟಕ್ಕೆ ನಿಗದಿತ 20 ಓವರ್ ಗಳಲ್ಲಿ 175 ರನ್ ಗಳಿಸಲಷ್ಟೇ ಶಕ್ತವಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments