Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದ್ರಾವಿಡ್, ಗಂಗೂಲಿ ಮೇಲೆ ಅಸಮಾಧಾನ ಹೊರಹಾಕಿ ಸಂಕಷ್ಟಕ್ಕೀಡಾದ ವೃದ್ಧಿಮಾನ್ ಸಹಾ

ದ್ರಾವಿಡ್, ಗಂಗೂಲಿ ಮೇಲೆ ಅಸಮಾಧಾನ ಹೊರಹಾಕಿ ಸಂಕಷ್ಟಕ್ಕೀಡಾದ ವೃದ್ಧಿಮಾನ್ ಸಹಾ
ಮುಂಬೈ , ಶುಕ್ರವಾರ, 25 ಫೆಬ್ರವರಿ 2022 (09:50 IST)
ಮುಂಬೈ: ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿ ವಿಕೆಟ್ ಕೀಪರ್ ವೃದ್ಧಿ ಮಾನ್ ಸಹಾ ಸಂಕಷ್ಟಕ್ಕೀಡಾಗಿದ್ದಾರೆ.

ತಮ್ಮನ್ನು ತಂಡದಿಂದ ಅವಗಣಿಸಿರುವುದಕ್ಕೆ ದ್ರಾವಿಡ್ ಮತ್ತು ಗಂಗೂಲಿ ವಿರುದ್ಧ ಸಹಾ ಅಸಮಾಧಾನ ಹೊರಹಾಕಿದ್ದರು. ದ್ರಾವಿಡ್ ಪರೋಕ್ಷವಾಗಿ ನಿವೃತ್ತಿಗೆ ಸೂಚಿಸಿದ್ದರು. ಗಂಗೂಲಿ ನನ್ನ ಕೈ ಬಿಟ್ಟರು ಎಂದು ಸಹಾ ನೇರ ಆರೋಪ ಮಾಡಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಸಹಾಗೆ ವಿವರಣೆ ಕೋರಿದೆ. ಇದು ಬಿಸಿಸಿಐ ಕೇಂದ್ರ ಗುತ್ತಿಗೆ ನಿಯಮಗಳ ಉಲ್ಲಂಘನೆಯಾಗಿದೆ. ಈ ನಿಯಮದ ಪ್ರಕಾರ ಆಟಗಾರರು ಬಿಸಿಸಿಐ ಯಾವುದೇ ನಿರ್ಧಾರವನ್ನು, ನಿಯಮಗಳನ್ನು, ಮ್ಯಾನೇಜ್ ಮೆಂಟ್ ಬಗ್ಗೆ ಅಥವಾ ಪಂದ್ಯದ ಬಗ್ಗೆ ಮಾಧ್ಯಮಗಳ ಮುಂದೆ ದೂರುವಂತಿಲ್ಲ. ಆದರೆ ಸಹಾ ಈ ನಿಯಮವನ್ನು ಮೀರಿರುವುದಕ್ಕೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಔಟ್ ಮಾಡುವ ಅವಕಾಶ ತಪ್ಪಿ ಹೋಗಿದ್ದಕ್ಕೆ ಹಣೆ ಚಚ್ಚಿಕೊಂಡ ಕೋಚ್ ದ್ರಾವಿಡ್