ಮುಂಬೈ: ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾದಲ್ಲಿ ಭಾರೀ ಬದಲಾವಣೆ ಮಾಡಲು ಬಿಸಿಸಿಐ ಚಿಂತನೆ ನಡೆಸಿದೆ. ಇದರ ಭಾಗವಾಗಿ ಫ್ಯೂಚರ್ ಪ್ಲ್ಯಾನ್ ಹಾಕಿಕೊಂಡಿದೆ.
ಅದರಂತೆ ಬಿಸಿಸಿಐ ಭವಿಷ್ಯದ ಯೋಜನೆಯಲ್ಲಿ ಯುವ ಆಟಗಾರರಿಗೆ ಹೆಚ್ಚು ಅವಕಾಶ ನೀಡಲು ತೀರ್ಮಾನಿಸಿದೆ. ಹೀಗಾಗಿ ಹಿರಿಯ ಕ್ರಿಕೆಟಿಗರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್ ಮುಂತಾದವರನ್ನು ತನ್ನ ಭವಿಷ್ಯದ ಯೋಜನೆಯಿಂದ ಕೈ ಬಿಟ್ಟಿದೆ.
ಯಾವ ಆಟಗಾರರಿಗೂ ಬಿಸಿಸಿಐ ನೇರವಾಗಿ ಟಿ20 ಮಾದರಿಗೆ ನಿವೃತ್ತಿ ಹೇಳಲು ಸೂಚಿಸಲ್ಲ. ಬದಲಾಗಿ ತನ್ನ ಭವಿಷ್ಯದ ಟೂರ್ನಿಗಳಲ್ಲಿ ಈ ಆಟಗಾರರನ್ನು ಕೈ ಬಿಟ್ಟು ಪರೋಕ್ಷವಾಗಿ ಅವರೇ ಕಿರು ಮಾದರಿಯಿಂದ ನಿವೃತ್ತಿ ಪಡೆಯುವಂತೆ ಮಾಡಬಹುದು ಎನ್ನಲಾಗಿದೆ.