ಮುಂಬೈ: ಕೊರೋನಾ ಕಾರಣದಿಂದ ರಣಜಿ ಕ್ರಿಕೆಟ್ ಆಯೋಜಿಸಲು ಬಿಸಿಸಿಐ ಹಿಂದೇಟು ಹಾಕುತ್ತಿದ್ದುದು ಕ್ರಿಕೆಟಿಗರಿಂದಲೇ ಆಕ್ಷೇಪ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ರಣಜಿ ಆಯೋಜಿಸಲು ಚಿಂತನೆ ನಡೆಸಿದೆ.
ಎರಡು ಹಂತಗಳಲ್ಲಾಗಿ ರಣಜಿ ಟೂರ್ನಿಯ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಮೊದಲು ಲೀಗ್ ಹಂತದ ಪಂದ್ಯಗಳು ಮತ್ತು ಎರಡನೆ ಭಾಗದಲ್ಲಿ ನಾಕೌಟ್ ಹಂತದ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ.
ಕೊರೋನಾದಿಂದಾಗಿ ಕಳೆದ ವರ್ಷವೂ ರಣಜಿ ಆಯೋಜಿಸಿರಲಿಲ್ಲ. ಜನವರಿ ಮೊದಲ ವಾರದಲ್ಲಿ ಕೊರೋನಾ ಕಾರಣದಿಂದ ಈ ವರ್ಷವೂ ರಣಜಿ ಆಯೋಜಿಸದೇ ಇರುವ ಬಗ್ಗೆ ಬಿಸಿಸಿಐ ತೀರ್ಮಾನಿಸಿತ್ತು. ಆದರೆ ಇದಕ್ಕೆ ದೇಶೀಯ ಆಟಗಾರರಿಂದ ಆಕ್ಷೇಪ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಈಗ ಫೆಬ್ರವರಿಯಲ್ಲಿ ಮೊದಲ ಹಂತದ ಪಂದ್ಯ ಆಯೋಜಿಸಲು ಬಿಸಿಸಿಐ ತಯಾರಿ ನಡೆಸಿದೆ.