ಮುಂಬೈ: ಪತ್ನಿ ಹಸೀನ್ ಜಹಾನ್ ಗೆ ಗೃಹ ಹಿಂಸೆ ನೀಡಿದ್ದಾರೆಂಬ ವರದಿಗಳ ಬೆನ್ನಲ್ಲೇ ಬಿಸಿಸಿಐ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ನೀಡಬೇಕಾಗಿದ್ದ ವಾರ್ಷಿಕ ಗುತ್ತಿಗೆ ರದ್ದು ಮಾಡಿತ್ತು. ಆದರೆ ಈ ರೀತಿ ಮಾಡಿ ತಪ್ಪು ಮಾಡಿತೇ?
ಹಾಗಂತ ಬಿಸಿಸಿಐ ಕಾನೂನು ಸಲಹೆಗಾರ್ತಿ ಉಷಾ ನಾಥ್ ಬಂಡೋಪಾಧ್ಯಾಯ ಅಭಿಪ್ರಾಯಪಟ್ಟಿದ್ದಾರೆ. ಶಮಿ ವೈಯಕ್ತಿಕ ಬದುಕಿನಲ್ಲಿ ಆಗಿರುವ ತಪ್ಪುಗಳಿಗೂ ಬಿಸಿಸಿಐಗೂ ಯಾವುದೇ ಸಂಬಂಧವಿಲ್ಲ.
ಅವೆರಡನ್ನೂ ಲಿಂಕ್ ಮಾಡಿ ಬಿಸಿಸಿಐ ವಾರ್ಷಿಕ ಗುತ್ತಿಗೆ ನೀಡದೇ ಇರುವುದು ತಪ್ಪಾಗುತ್ತದೆ. ಒಬ್ಬ ಆಟಗಾರನನ್ನು ತಂಡಕ್ಕೆ ಆರಿಸುವುದು ಆತನ ಸಾಮರ್ಥ್ಯದ ಆಧಾರದ ಮೇಲೆ. ವೈಯಕ್ತಿಕ ಬದುಕಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ