Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕ್ರಿಕೆಟಿಗರು ಪತ್ನಿಯರ ಜತೆ ಇರಲು ಬಿಸಿಸಿಐ ಕೈಗೊಂಡ ನಿರ್ಧಾರವೇನು ಗೊತ್ತಾ?!

ಕ್ರಿಕೆಟಿಗರು ಪತ್ನಿಯರ ಜತೆ ಇರಲು ಬಿಸಿಸಿಐ ಕೈಗೊಂಡ ನಿರ್ಧಾರವೇನು ಗೊತ್ತಾ?!
ಮುಂಬೈ , ಶನಿವಾರ, 13 ಅಕ್ಟೋಬರ್ 2018 (08:59 IST)
ಮುಂಬೈ: ವಿದೇಶ ಪ್ರವಾಸದ ವೇಳೆ ಪತ್ನಿಯರನ್ನು ಸುದೀರ್ಘ ಅವಧಿಗೆ ಜತೆಗಿಟ್ಟುಕೊಳ್ಳಲು ಅವಕಾಶ ಕೊಡಬೇಕೆಂಬ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮನವಿಗೆ ಬಿಸಿಸಿಐ ಪರಿಗಣಿಸಿದೆ.

ಮುಂಬೈನಲ್ಲಿ ಬಿಸಿಸಿಐ ಕಚೇರಿಯಲ್ಲಿ ನಡೆದ ಕಾರ್ಯನಿರ್ವಾಹಕ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗಿದೆ ಎನ್ನಲಾಗಿದೆ. ಕೊಹ್ಲಿ ಹೇಳಿದಂತೆ ಪ್ರವಾಸದುದ್ದಕ್ಕೂ ಅಲ್ಲದಿದ್ದರೂ ಕೊಂಚ ಹೆಚ್ಚು ಸಮಯ ಕುಟುಂಬದವರ ಜತೆ ಕಾಲ ಕಳೆಯಲು ಅವಕಾಶ ನೀಡುವ ಸಾಧ್ಯತೆಯಿದೆ.

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೆಲವು ದಿನಗಳ ಕಾಲ ಫ್ಯಾಮಿಲಿ ಸಮಯ ಎಂದೂ ಅವಧಿ ವಿಸ್ತರಿಸುವ ಸಾಧ್ಯತೆಯಿದೆ. ಆದರೆ ವಿಶ್ವಕಪ್ ಸಂದರ್ಭದಲ್ಲಿ ಈ ನಿಯಮದಲ್ಲಿ ಬದಲಾವಣೆ ಮಾಡದೇ ಇರಲು ಬಿಸಿಸಿಐ ಅಧಿಕಾರಿಗಳು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ದುರಾದೃಷ್ಟವಂತನಾದ ಶ್ರಾದ್ಧೂಲ್ ಠಾಕೂರ್