ಕೊಲೊಂಬೊ: ತ್ರಿಕೋನ ಟಿ20 ಸರಣಿಯ ಅಂತಿಮ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ಅತಿಥೇಯ ಲಂಕಾ ವಿರುದ್ಧ ಗೆಲುವಿಗೆ ಸಮೀಪವಿದ್ದಾಗ ನಡೆದುಕೊಂಡ ರೀತಿ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಬಾಂಗ್ಲಾ ಆಟಗಾರರು ಸೋಲು-ಗೆಲುವಿನ ಸನಿಹವಿದ್ದಾಗ ಲಂಕಾ ಆಟಗಾರರೊಂದಿಗೆ ಜಗಳ ತೆಗೆದು ಪಂದ್ಯ ಬಹಿಷ್ಕರಿಸುವ ಪ್ರಹಸನ ನಡೆಸಿದ್ದರು. ಇಷ್ಟಕ್ಕೇ ಬಾಂಗ್ಲಾ ಆಟಗಾರರ ದುಂಡಾವರ್ತನೆ ಮುಗಿದಿರಲಿಲ್ಲ ಎಂಬುದು ಇದೀಗ ಬೆಳಕಿಗೆ ಬಂದಿದೆ.
ಪಂದ್ಯದ ಮುಗಿದ ಮೇಲೆ ಬಾಂಗ್ಲಾ ಡ್ರೆಸ್ಸಿಂಗ್ ರೂಂನ ಗಾಜು ಪುಡಿ ಪುಡಿಯಾಗಿರುವುದು ಕಂಡುಬಂದಿದೆ. ಈ ತಗಾದೆ ಸಂದರ್ಭದಲ್ಲಿ ಅಥವಾ ಗೆದ್ದ ಮೇಲೆ ಬಾಂಗ್ಲಾ ಆಟಗಾರರು ಈ ಕೃತ್ಯವೆಸಗಿರುವುದು ಸ್ಪಷ್ಟವಾಗಿದೆ.
ಇದೀಗ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ಈ ಘಟನೆಯ ದೃಶ್ಯಾವಳಿಗಳನ್ನು ಪರಿಶೀಲಿಸಿ ದುಂಡಾವರ್ತನೆ ತೋರಿದ ಆಟಗಾರರನ್ನು ಪತ್ತೆ ಹಚ್ಚುತ್ತಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ದೊಡ್ಡ ಮಟ್ಟಿನ ಶಿಕ್ಷೆಯಾಗುವ ಮೊದಲು ಬಾಂಗ್ಲಾ ಕ್ರಿಕೆಟ್ ಮ್ಯಾನೇಜ್ ಮೆಂಟ್ ಈ ನಷ್ಟದ ಪರಿಹಾರ ಒದಗಿಸುವುದಾಗಿ ಹೇಳಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ